ಮೂಡುಬಿದಿರೆ ಬೆಸ್ಟ್‌ಫ್ರೆಂಡ್ಸ್ ತಂಡದ ವಾರ್ಷಿಕೋತ್ಸವ


ಮೂಡುಬಿದಿರೆ: ಬೆಸ್ಟ್‌ ಫ್ರೆಂಡ್ಸ್ ತಂಡದ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಹಾಸ ಸನಿಲ್ ಹಾಗೂ ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಿತೇಶ್ ಕುಮಾರ್ ಶೆಟ್ಟಿ ಅವರನ್ನು‌ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬೆಸ್ಟ್‌ ಫ್ರೆಂಡ್ಸ್ ತಂಡದ ಅಧ್ಯಕ್ಷ ಪ್ರಸನ್ನ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಸಚ್ಚೇರಿಪೇಟೆ ಸಂದೀಪ್ ಶೆಟ್ಟಿ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಗದೀಶ ಅಧಿಕಾರಿ, ಆದ್ಯಪಾಡಿ‌ ಮಹಾಲಿಂಗೇಶ್ವರ ದೇವಸ್ಥಾನದ‌ ಹರೀಶ್ ಶೆಟ್ಟಿ, ಮೂಡಾದ ಅಧ್ಯಕ್ಷರಾದ ಹರ್ಷವರ್ಧನ್‌ಪಡಿವಾಳ್, ಐಕೇರ್  ಬಿಲ್ಡರ್ಸ್ ನ ಅಶ್ವಿನ್‌ ಪಿರೇರಾ ಉಪಸ್ಥಿತರಿದ್ದರು. 

Previous Post Next Post

Contact Form