ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ: 45 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ


682 ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಅಧಿಕ ಅಂಕ

ವಿದ್ಯಾಗಿರಿ: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 682 ವಿದ್ಯಾರ್ಥಿಗಳು 95% ಶೇಕಡಾಕ್ಕಿಂತ  ಅಧಿಕ ಅಂಕವನ್ನು  ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ರಾಜ್ಯದ ಟಾಪ್ ಟೆನ್ ರ‍್ಯಾಂಕ್‌ನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಒಟ್ಟು 45 ವಿದ್ಯಾರ್ಥಿಗಳು ಸ್ಥಾನವನ್ನು ಪಡೆಯುವ ಮೂಲಕ ಆಳ್ವಾಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ಸಾಧನೆ ಮೆರೆಯುವಂತೆ ಮಾಡಿದೆ. 

ಜ್ಞಾನ ವಿಭಾಗದಲ್ಲಿ  ನೂತನ ಆರ್ ಗೌಡ, 600ರಲ್ಲಿ  595 ಅಂಕ ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ.  ವಾಣಿಜ್ಯ ವಿಭಾಗದಲ್ಲಿ ತರುಣ್ ಕುಮಾರ್ ಪಾಟೀಲ್ 594 ಅಂಕ ಪಡೆದು 4ನೇ ಸ್ಥಾನ ಪಡೆದಿದ್ದಾರೆ. ಆಕಾಶ್ ಪಿಎಸ್, ಅನಿರುದ್ಧ ಪಿ ಮೆನನ್, ಸುಮಿತ್ ಸುದೀಂದ್ರ 5ನೇ ರ‍್ಯಾಂಕ್ ಗಳಿಸಿದರೆ, ಸಹನಾ ಕೆ, ಶಿವಷೇಶ 6ನೇ ರ‍್ಯಾಂಕ್, ವಾಣಿ ಕೆ, ಮೇಧಾ ವಿ, ಜೀವಿಕಾ ಎಸ್, ಹರೀಶ್ ಉದಯ್, ಭೂಮಿ, ಷಾನ್ ಪಿಂಟೋ,  ಅಶೋಕ್ ಸುತಾರ್, ಮಂಜುನಾಥ್ ಡಿ. 7ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. 

29 ವಿದ್ಯಾರ್ಥಿಗಳು 98.33%ಕ್ಕೂ ಅಧಿಕ, 56 ವಿದ್ಯಾರ್ಥಿಗಳು 98%ಕ್ಕೂ ಅಧಿಕ ಫಲಿತಾಂಶ ಪಡೆದಿದ್ದು, 682 ವಿದ್ಯಾರ್ಥಿಗಳು 95% ಕ್ಕಿಂತಲೂ ಅಧಿಕ, 2027 ವಿದ್ಯಾರ್ಥಿಗಳು 90%ಕ್ಕಿಂತಲೂ ಅಧಿಕ, 2882 ವಿದ್ಯಾರ್ಥಿಗಳು 85% ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಕನ್ನಡ ವಿಷಯದಲ್ಲಿ 22, ಸಂಸ್ಕೃತದಲ್ಲಿ 54, ಬೌತಶಾಸ್ತ್ರದಲ್ಲಿ 9, ರಸಾಯನ ಶಾಸ್ತ್ರದಲ್ಲಿ 81, ಗಣಿತದಲ್ಲಿ 232, ಜೀವಶಾಸ್ತ್ರದಲಿ 290, ಗಣಕ ವಿಜ್ಞಾನದಲ್ಲಿ 39, ಅಕೌಂಟೆನ್ಸಿ-53, ಸಂಖ್ಯಾಶಾಸ್ತ್ರದಲ್ಲಿ 07, ಇಲೆಕ್ಟ್ರಾನಿಕ್ಸ್ ನಲ್ಲಿ 4, ಅರ್ಥಶಾಸ್ತ್ರದಲ್ಲಿ 35, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 09, ಬೇಸಿಕ್ ಮ್ಯಾತ್ಸ್ ನಲ್ಲಿ 27, ಸಮಾಜಶಾಸ್ತ್ರದಲ್ಲಿ 2, ರಾಜ್ಯಶಾಸ್ತçದಲ್ಲಿ 2 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

4 ವಿಷಯಗಳಲ್ಲಿ ನೂರಕ್ಕೆ ನೂರು ಅಂಕವನ್ನು 9 ವಿದ್ಯಾಥಿಗಳು ಪಡೆದರೆ,  3 ವಿಷಯಗಳಲ್ಲಿ  ನೂರಕ್ಕೆ ನೂರು 38 ವಿದ್ಯಾರ್ಥಿಗಳು, 2 ವಿಷಯಗಳಲ್ಲಿ  148 ವಿದ್ಯಾಥಿಗಳು ನೂರಕ್ಕೆ ನೂರು ಅಂಕವನ್ನು ಪಡೆದರೆ, ಒಂದು ವಿಷಯದಲ್ಲಿ 571 ವಿದ್ಯಾರ್ಥಿಗಳು  ನೂರಕ್ಕೆ ನೂರು ಅಂಕವನ್ನು ಪಡೆದಿದ್ದಾರೆ.  ಆಳ್ವಾಸ್ ಪದವಿಪೂರ್ವ ಕಾಲೇಜಿನ 6 ಜನ ವಿಶೇಷಚೇತನ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಪಡೆದು ಸಾಧನೆ ಮೆರೆದಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರೊ. ಎಂ. ಸದಾಕತ್, ಕಾಮರ್ಸ್ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ, ಉಪಸ್ಥಿತರಿದ್ದರು.

NOOTHANA R GOWDA

TARUN KUMAR PATIL


AKARSH P S

ANIRUDH P MENON


SUMIT VARDHAMAN ROOGE

M SUDHEENDRA KAMATH

SAHANA KOKATANUR

SHIVA SHESH K R

VANI KRISHNAJI GUDDADAMANI

MEDHA VIDYANANDA

JEEVIKA SANTOSHKUMAR HIREMATH

HARISH UDAY KULKARNI

BHOOMI R BHANDARI

SHAUN PINTO

ASHOK SUTHAR

MANJUNATH D

NAMITH A P

PREETHAM M

VINAY SALADHI

DIYA SHUBHAKAR POOJARY

VIJAYKUMAR YALLAPPA DEVINAVAR

SHREYA GOWRI K N

CHETHAN

VEEKSHA V SHETTY

SUKRATA SUBRAY BHAT

AKASHGOUDA G KOPPARAD

SUPRITHA N S

RAKSHITA VINAYAK NAIK

SHRADDHA RAO

BHUVAN KALESHWAR PAWAR

BHUMIKA SANJEEV NAIK

SHREEJA HEBBAR

R RAKSHITA

RAKSHITA RACHAGOUDAR

AMAN PRIYANSH

ANKITA RAVASO PATIL

BHAVANA BIRADAR

BINDU I

MEGHANA M Y

ROHIT RAJU SINGE

SINCHANA P B

MADAGONDA TUKARAM HORTIKAR

SHARANYA BANGERA

CHAITANYA SRIRANGA

DIVYA R JYOTI
Previous Post Next Post

Contact Form