ಮೂಡುಬಿದಿರೆ: ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ವರ್ಷಾವಧಿ ಮಹೋತ್ಸವ ಫೆಬ್ರವರಿ 24ರಿಂದ 28ರವರೆಗೆ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯೊಂದಿಗೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು:
24-2-2026 ಮಂಗಳವಾರ : ಬೆಳಿಗ್ಗೆ ಗಂಟೆ 09:40ಕ್ಕೆ ಗುರುಮಠದಲ್ಲಿ ಪ್ರಾರ್ಥನೆ, ಜಗದ್ಗುರು ಶ್ರೀಶ್ರೀಶ್ರೀ ಅಯ್ಯಸ್ವಾಮಿಗಳ ಪಾದುಕೆಯೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮನ. ಶ್ರೀ ಕ್ಷೇತ್ರದಲ್ಲಿ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಜಗದ್ಗುರು ಶ್ರೀಶ್ರೀಶ್ರೀ ಅಯ್ಯಸ್ವಾಮಿಗಳ ಪಾದುಕಾಪೂಜೆ, ಅಂಕುರಾರ್ಪಣೆ, ಮಹಾಪೂಜೆ, ಸಂತರ್ಪಣೆ, ರಾತ್ರಿ ರಾಕ್ಷೆÆÃಘ್ನ, ನವಗ್ರಹ, ವಾಸ್ತು ಹೋಮ, 6:45ಕ್ಕೆ ಮಹಾಪೂಜೆ, ಸಂತರ್ಪಣೆ.
25-02-2026 ಬುಧವಾರ : ಬೆಳಿಗ್ಗೆ ಗಣಹೋಮ, ನವಕ ಕಲಾಹೋಮ, ಪರಿವಾರ ದೇವತೆಗಳಿಗೆ ನವಕ ಕಲಶಾಭಿಷೇಕ, ಬೆಳಿಗ್ಗೆ ಗಂಟೆ 10:30ಕ್ಕೆ ಮಹಾಪೂಜೆ, ಉತ್ಸವ, ಸಂತರ್ಪಣೆ, ಸಂಜೆ ಗಂಟೆ 6:00ಕ್ಕೆ ಮಹಾಪೂಜೆ, ರಾತ್ರಿ ಉತ್ಸವ, ಸಂತರ್ಪಣೆ. ಬೆಳಿಗ್ಗೆ 6:00 ರಿಂದ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಮೂಡುಬಿದಿರೆ ಇವರಿಂದ ಉದಯರಾಗ - ಕೊಳಲು ವಾದನ - ಭಕ್ತಿಗಾಯನ ಕಾರ್ಯಕ್ರಮ.
26-02-2026 ಗುರುವಾರ : ಬೆಳಿಗ್ಗೆ ಗಣಹೋಮ, ಶ್ರೀ ದೇವರಿಗೆ ನವಕ ಕಲಾಹೋಮ, ಕಲಶಾಭಿಷೇಕ, ಪವಮಾನ ಅಭಿಷೇಕ, ಬೆಳಿಗ್ಗೆ ಗಂಟೆ 9:00ಕ್ಕೆ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆಗಮನ, 9:30ಕ್ಕೆ ಪಾದುಕಾಪೂಜೆ, 10:30ಕ್ಕೆ ಮಹಾಪೂಜೆ, ಮಹೋತ್ಸವ, ಲಾಲಕ್ಕಿ ಪಲ್ಲಕ್ಕಿ ಉತ್ಸವಗಳು, ಬಟ್ಲು ಕಾಣಿಕೆ, ಮಹಾ ಅನ್ನಸಂತರ್ಪಣೆ, ಸಂಜೆ ಗಂಟೆ 5:30ಕ್ಕೆ ಮಹಾಪೂಜೆ, ಉತ್ಸವ, ಪೇಟೆಸವಾರಿ, ಸಂತರ್ಪಣೆ, ಶ್ರೀ ಭೂತಬಲಿ, ಕವಾಟ ಬಂಧನ.
27-02-2026 ಶುಕ್ರವಾರ : ಬೆಳಿಗ್ಗೆ ಗಂಟೆ 6:50ಕ್ಕೆ ಕವಾಟೋದ್ಘಾಟನೆ, ಗಣಹೋಮ, ತುಲಾಭಾರ ಸೇವೆ, ಮಹಾಪೂಜೆ, ಉತ್ಸವ, ವಸಂತ ಮಂಟಪದಲ್ಲಿ ಅಷ್ಟಾವಧಾನ ಸೇವೆ, ಅವಧೃತ, ಸಂತರ್ಪಣೆ, ರಾತ್ರಿ ಗಂಟೆ 7:00ಕ್ಕೆ ಮಹಾಪೂಜೆ, ರಂಗಪೂಜೆ, ಬ್ರಹ್ಮಾರ್ಪಣೆ, ಜಗದ್ಗುರು ಶ್ರೀಶ್ರೀಶ್ರೀ ಅಯ್ಯಸ್ವಾಮಿಗಳ ಪಾದುಕೆಯೊಂದಿಗೆ ಗುರುಮಠಕ್ಕೆ ಪುನರಾಗಮನ, ಸಂತರ್ಪಣೆ
28-02-2026 ಶನಿವಾರ : ಬೆಳಿಗ್ಗೆ 11-30ಕ್ಕೆ ಮಹಾಪೂಜೆ, ಸಂಪ್ರೋಕ್ಷಣೆ, ಫಲಮಂತ್ರಾಕ್ಷತೆ, ಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭೆ :
ದಿನಾಂಕ 25-02-2026ನೇ ಬುಧವಾರದಂದು ಮಧ್ಯಾಹ್ನ 12:00ಕ್ಕೆ ಆಡಳಿತ ಮೊಕ್ತೇಸರರಾದ ಎಂ.ಕೆ. ಬಾಲಕೃಷ್ಣ ಆಚಾರ್ಯ ಉಳಿಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಕಟಪಾಡಿ - ಪಡುಕುತ್ಯಾರು ಶ್ರೀಮತ್ ಜಗದ್ಗುರು ಶ್ರೀ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ, ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಲಿದ್ದಾರೆ.
ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮುರಹರಿ ಕೆ. ಆಚಾರ್ಯ, ಅದಾನಿ ಗ್ರೂಪ್ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಆಳ್ವ, ಲಾಡಿ ಬ್ರಹ್ಮಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಂತಕೃಷ್ಣ ರಾವ್ ಮುಖ್ಯ ಅತಿಥಿಗಳಾಗಿ ಭಾಗಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪಡೆದ ಯಶವಂತ ಎಂ.ಜಿ., ಡ್ರೋನ್ ತಯಾರಿಕೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಮಾಸ್ಟರ್ ಈಶಾನ ವಿಕ್ರಮ ಪಾಲ್ತಾಡಿ ಇವರನ್ನು ಸನ್ಮಾನಿಸಲಾಗುವುದು.
ಪಡುಮಾರ್ನಾಡು ಗ್ರಾಮ ಕೂಡುವಳಿಕೆ ಮೊಕ್ತೇಸÀರರಾದ ಪುರೋಹಿತ ಜಗನ್ನಾಥ ಆಚಾರ್ಯ, ಪ್ರಾಂತ್ಯ ಸರಕಾರಿ ಪ್ರೌಢಶಾಲೆಯ ಪದವೀಧರ ಸಹಶಿಕ್ಷಕಿ ರತ್ನಾವತಿ ಆಚಾರ್ ಕೆ., ಪೆನ್ಸಿಲ್ ಆರ್ಟ್ ಕಲಾವಿದ ಅಖಿಲೇಷ ಆಚಾರ್ಯ ಇವರಿಗೆ ಗೌರವಾರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು :
ದಿನಾಂಕ 24-2-2026ರಂದು ಸಂಜೆ 6ರಿಂದ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದ್ದು ರಾತ್ರಿ 7:00ಕ್ಕೆ ಆಡಳಿತ ಮೊಕ್ತೇಸರ ಎಂ.ಕೆ. ಬಾಲಕೃಷ್ಣ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ರಂಗ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ, ಶಿಕ್ಷಕಿ ಗೀತಾಚಂದ್ರ ಕಾರ್ಕಳ ಭಾಗವಹಿಸಲಿದ್ದಾರೆ.
ಮೊಕ್ತೇಸರರಾದ ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ, ಶ್ರೀ ಕಾಳಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಉಪಸ್ಥಿತರಿರುವರು.
ರಾತ್ರಿ 8:00ರಿಂದ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ವತಿಯಿಂದ ಸಾಂಸ್ಕೃತಿಕ ವೈವಿಧ್ಯ ಮತ್ತು ರಾತ್ರಿ 10:00ರಿಂದ ಗೊಂಚಿಲ್ ಕಲಾವಿದೆರ್ ಪನೆಗುಂಡಿ ಅಭಿನಯಿಸುವ, ಶ್ರೀನಿವಾಸ ಆಚಾರ್ಯ ಪನೆಗುಂಡಿ ನಿರ್ದೇಶನದ ಕಲಾಕೇದಗೆ ರಂಗಮಾಣಿಕ್ಯ ಇಂದು ಎಸ್. ಮಂಗಳೂರು ರಚನೆಯ ‘ಈರ್ ಪನ್ಪರಾ?’ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ದಿನಾಂಕ 25-02-2026 ರಂದು ಬುಧವಾರ ರಾತ್ರಿ 8-00ರಿಂದ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ವತಿಯಿಂದ ಕಾಪಿಕಾಡ್, ವಾಮಂಜೂರು, ಸಾಯಿ ಅಭಿನಯದ ‘ಏರ್ಲಾ ಗ್ಯಾರಂಟಿ ಅತ್ತ್’ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ದಿನಾಂಕ 26-02-2026ರಂದು ಗುರುವಾರ ರಾತ್ರಿ 7-00ರಿಂದ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘದ ಸಂಯೋಜನೆಯಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳದವರಿಂದ “ವರ್ಣ ಪಲ್ಲಟ” ಯಕ್ಷಗಾನ ಬಯಲಾಟ
ದಿನಾಂಕ 27-02-2026ರಂದು ಶುಕ್ರವಾರ ಮಧ್ಯಾಹ್ನ 12:00ರಿಂದ ಮಧುರ ಮೆಲೋಡಿ ಪ್ರಸನ್ನ ಆಚಾರ್ಯ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ತಾವೆಲ್ಲರೂ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ಉತ್ಸವಾದಿಗಳಲ್ಲಿ ಭಾಗವಹಿಸಿ, ಶ್ರೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ತಂತ್ರಿಗಳಾದ ಬ್ರಹ್ಮಶ್ರೀ ಪುರೋಹಿತ ಎನ್. ಕೇಶವ ಆಚಾರ್ಯ, ಪ್ರಧಾನ ಆರ್ಚಕರಾದ ಬ್ರಹ್ಮಶ್ರೀ ಪುರೋಹಿತ ವಿಶ್ವೇಶ್ವರ ಆಚಾರ್ಯ, ಆಡಳಿತ ಮೊಕ್ತೇಸರರಾದ ಎಂ. ಕೆ. ಬಾಲಕೃಷ್ಣ ಆಚಾರ್ಯ ಉಳಿಯ, 2ನೇ ಮೊಕ್ತೇಸರರಾದ ಶಿವರಾಮ ಆಚಾರ್ಯ ಉಳಿಯ, 3ನೇ ಮೊಕ್ತೇಸರರಾದ ಯೋಗೀಶ ಆಚಾರ್ಯ, ನೂತನ ಸಭಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಗ್ರಾಮ ಕೂಡುವಳಿಗೆಯ ಮೊಕ್ತೇಸರರು, ಶ್ರೀ ಕಾಳಿಕಾಂಬ ಸೇವಾ ಸಮಿತಿ ಮತ್ತು ಶ್ರೀ ಕಾಳಿಕಾಂಬ ಮಹಿಳಾ ಸಮಿತಿ ವಿನಂತಿಸಿದೆ.
