ಮೂಡುಬಿದಿರೆ: ಚಪ್ಪಲಿ ಅಂಗಡಿ ನೌಕರನ ವಿರುದ್ಧ ದಾಖಲಾಗಿದ್ದ ಮಾನಭಂಗ ಯತ್ನ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿದೆ.
ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ 89/2023 ರಂತೆ ಚಪ್ಪಲಿ ಅಂಗಡಿ ನೌಕರನಾದ ಸರ್ಪುದ್ದೀನ್ ಎಂಬವರ ವಿರುದ್ಧ ವಿರುದ್ದ ಮಾನಭಂಗ ಯತ್ನದ ಪ್ರಕರಣ ದಾಖಲಾಗಿತ್ತು. ಸದ್ರಿ ಪ್ರಕರಣದಲ್ಲಿ ಪೋಲೀಸರು ಕಾರ್ಕಳದ ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿಯನ್ನು ದಾಖಲು ಮಾಡಿದ್ದರು.
ಆರೋಪಿಯ ಪರ ಮೂಡುಬಿದಿರೆಯ ನ್ಯಾಯವಾದಿಯವರಾದ ಶರತ್ ಡಿ. ಶೆಟ್ಟಿ ಅವರು ಸಮರ್ಥವಾಗಿ ವಾದಿಸಿದ್ದು, ಸಾಕ್ಷ್ಯಾಧಾರಗಳು ಸಮರ್ಪಕವಾಗಿಲ್ಲ ಎಂಬುದನ್ನು ಪರಿಗಣಿಸಿ ನ್ಯಾಯಾಲಯವು ಆರೋಪಿಯನ್ನು ದೋಷಮುಕ್ತಗೊಳಿಸಿ, ಆರೋಪದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದೆ.
