ಮಾರೂರು ಬ್ರಹ್ಮಕಲಶ: ಏ.29ರಂದು ಪುನ: ಪ್ರತಿಷ್ಠೆ, ಮೇ 1: ಬ್ರಹ್ಮಕಲಶಾಭಿಷೇಕ


ಮೂಡುಬಿದಿರೆ: ಎಂಟು ಶತಮಾನಗಳಿಗೂ ಹೆಚ್ಚಿನ ಇತಿಹಾಸವುಳ್ಳ ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನವು ಸಮಗ್ರವಾಗಿ ಜೀರ್ಣೋದ್ಧಾರಗೊಂಡಿದ್ದು ಏ.29ರಂದು ಪುನ: ಪ್ರತಿಷ್ಠೆ, ಮೇ 1ರಂದು ಬೆ.ಗಂ.7.30ಕ್ಕೆ ಬ್ರಹ್ಮಕಲಶಾಭಿಷೇಕ ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಮೂಡುಬಿದಿರೆ ವೇಣೂರು ಹಾದಿಯಲ್ಲಿ 10 ಕಿ.ಮೀ, ಬೆಳ್ತಂಗಡಿಯಿAದ 23 ಕಿ.ಮೀ. ದೂರದಲ್ಲಿ ರಾಜ್ಯಹೆದ್ದಾರಿ ಪಕ್ಕದಲ್ಲಿ, ಫಲ್ಗುಣಿ ನದಿ ತೀರದಲ್ಲಿರುವ ದೇವಸ್ಥಾನವು ಬಿನ್ನಾಣಿ ಸೀಮೆಗೆ ಒಳಪಟ್ಟಮಾರೂರು, ಕಲ್ಲಬೆಟ್ಟು, ಕರಿಂಜೆ, ಮಾರ್ನಾಡು, ಕರ್ಪೆ, ಮಾರ್ಪಾಡಿ, ತೋಡಾರು, ಪುಚ್ಚಮೊಗರು ಹೊಸಬೆಟ್ಟು ಹೀಗೆ 9 ಮಾಗಣೆಗಳ 12ಕ್ಕೂ ಮಾಗಣೆಯ ಗ್ರಾಮಗಳ ಭಕ್ತಾದಿಗಳ ಶ್ರದ್ಧಾಕೇಂದ್ರ ವಾಗಿದೆ ಎಂದವರು ಹೇಳಿದರು.

ಗರ್ಭಗುಡಿ, ಮುಖಮಂಟಪ, ಗೋಪುರವನ್ನು ದಾನಿಗಳ ಸಹಕಾರದಲ್ಲಿ ಸುಂದರವಾಗಿ ನಿರ್ಮಿಸಲಾಗಿದೆ. ಇದಲ್ಲದೆ, ತೀರ್ಥಮಂಟಪ, ಹನುಮಂತ, ಗಣಪತಿ ಗುಡಿಗಳು, ಉಗ್ರಾಣ, ಕೊಡಮಣಿತ್ತಾಯ ಸ್ಥಾನ, ತಂತ್ರಿಗಳ ಕೊಠಡಿ, ಜಾತ್ರೋತ್ಸವ ಕಟ್ಟೆ, ಕಾರ್ಯಾಲಯ, ನೂತನ ಧ್ವಜಸ್ತಂಭ, ಧ್ವಜಕಟ್ಟೆ, ಬಲಿಪೀಠ, ದ್ವಾರ ನಿರ್ಮಾಣ, ಸಂಪೂರ್ಣ ವಿದ್ಯುತ್ ವ್ಯವಸ್ಥೆ ಎಲ್ಲವೂ ಸುವ್ಯವಸ್ಥಿತವಾಗಿ ನಡೆದಿವೆ.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜೀವಂಧರ ಕುಮಾರ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಜೀರ್ಣೋದ್ಧಾರ, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಶಂಭು ಎನ್.. ಶೆಟ್ಟಿ, ಆಡಳಿತ ಮೊಕ್ತೇಸರ ಹೊಸಂಗಡಿ ಅರಮನೆ ಸಂಪತ್ ಕುಮಾರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ವೇ.ಮೂ. ರಾಮದಾಸ ಆಸ್ರಣ್ಣ, ಪ್ರಧಾನ ಅರ್ಚಕ ವೆಂಕಟರಾಜ ಆಸ್ರಣ್ಣ, ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಕೆ. ಶೆಟ್ಟಿ, ಶ್ರೀಪತಿ ಉಪಾಧ್ಯಾಯ ಬಡೆಕೋಡಿ, ಮಿತ್ತೊಟ್ಟುಗುತ್ತು ಸುಧಾಕರ ಶೆಟ್ಟಿ, ಕೋಶಾಧಿಕಾರಿ ಶಂಕರ ಎ. ಕೋಟ್ಯಾನ್, ಸ್ವಾಗತ ಸಮಿತಿ ಸದಸ್ಯ ರಮೇಶ್ ಎಸ್. ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.

Previous Post Next Post

Contact Form