ಏನುಸುಖವೋ ರಂಗಾ.. ಭಜನಾ ಆಲ್ಬಂ ಲೊಕಾರ್ಪಣೆ

ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಯೂಟ್ಯೂಬ್ ಚಾನೆಲ್ ಮೂಲಕ ಏನುಸುಖವೋ ರಂಗಾ.. ಭಜನಾ ಆಲ್ಬಂ ಲೊಕಾರ್ಪಣೆ ಕಾರ್ಯಕ್ರಮ ಶ್ರೀ ದೇವಳದಲ್ಲಿ ಶ್ರೀ ದೇವರ ಮೂಲ ಪ್ರತಿಷ್ಠಾ ವರ್ದಂತಿಯ  ಸುಸಂದರ್ಭದಲ್ಲಿ ಸರಳವಾಗಿ ನೆರವೇರಿತು. ಆಡಳಿತ ಮೊಕ್ತೇಸರ ಜಿ.ಉಮೇಶ ಪೈ ಭಜನಾ ಆಲ್ಬಂ ಲೋಕಾರ್ಪಣೆಗೊಳಿಸಿ ದೇವಳದ ಮಾಜಿ ಮೊಕ್ತೇಸರರೂ ಭಜನಾ ಮಂಡಳಿಯ ಅಧ್ಯಕ್ಷರಾಗಿ ಸಕ್ರಿಯರಾಗಿದ್ದ ದಿ. ಎಂ. ಉಮೇಶ ಕಾಮತ್ ಅವರು ಮೂಡುವೇಣುಪುರ ನಾಮಾಂಕಿತದೊAದಿಗೆ ಬರೆದಿರುವ ಮುನ್ನೂರಕ್ಕೂ ಅಧಿಕ ಕನ್ನಡ ಕೊಂಕಣಿ ಭಜನೆಗಳ ಪೈಕಿ ಆಯ್ದ ಹಲವು ಭಜನೆಗಳನ್ನು ಅವರ ಜನ್ಮ ಅಮೃತ ವರ್ಷಾಚರಣೆಯ ಈ ಸಂದರ್ಭದಲ್ಲಿ ಅತ್ಯಂತ ಕಲಾತ್ಮಕ ಚಿತ್ರೀಕರಣದೊಂದಿಗೆ ವೀಡಿಯೋ ಅಲ್ಬಂ ರೂಪದಲ್ಲಿ ಹೊರತರಲು ಚಾಲನೆ ನೀಡುತ್ತಿರುವುದು ಸಕಾಲಿಕ ಎಂದು ಶುಭ ಹಾರೈಸಿದರು. 


ಮಂಡಳಿಯ ಪರವಾಗಿ ಎಂ. ನಾಗೇಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೇವಳದ ಟ್ರಸ್ಟಿಗಳು, ಭಜನಾ ಮಂಡಳಿಯ ಅಧ್ಯಕ್ಷ ವಿಘ್ನೇಶ್ ಪ್ರಭು, ಕಾರ್ಯದರ್ಶಿ ರಘುನಂದನ್ ಕಾಮತ್, ಆಲ್ಬಂ ಗಾಯಕ ಡಾ. ಸುಮಂತ್ ಶೆಣೈ, ನಿರ್ಮಾಣ ಪ್ರಮುಖರಾದ ಎಂ. ಗೌರವ್ ಪ್ರಭು, ಕೆ.ರಾಕೇಶ್ ಕಾಮತ್ , ಉಮೇಶ್ ಕಾಮತ್ ಅವರ ಪುತ್ರ ಎಂ. ಗಣೇಶ್ ಕಾಮತ್ ಸಹಿತ ಪ್ರಮುಖರು ಹಾಜರಿದ್ದರು.

Previous Post Next Post

Contact Form