ವಿಶೇಷ ವಿಮಾನದಲ್ಲಿ ಇಂದೇ ಅಫ್ಘಾನಿಸ್ತಾನದಿಂದ ವಾಪಾಸ್ಸಾಗುವಂತೆ ಭಾರತೀಯರಿಗೆ ಸಲಹೆ

 ಕಾಬೂಲ್, ಆ 10 : ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರು ಇಂದೇ ವಿಶೇಷ ವಿಮಾನದಲ್ಲಿ ಭಾರತಕ್ಕೆ ವಾಪಾಸ್ಸಾಗುವಂತೆ ಭಾರತ ಸರ್ಕಾರ ಮನವಿ ಮಾಡಿದೆ.


ತಾಲಿಬಾನ್‌ ಹಾಗೂ ಅಫ್ಘಾನ್‌‌‌ ಭದ್ರತಾ ಪಡೆಗಳ ನಡುವೆ ತೀವ್ರ ಹೋರಾಟ ನಡೆಯುತ್ತಿರುವ ಹಿನ್ನೆಲೆ ಭಾರತ ಸರ್ಕಾರ ಈ ಸಲಹೆ ನೀಡಿದೆ.

ತಾಲಿಬಾನ್‌ ಬಂಡುಕೋರರ ದೃಷ್ಟಿ ಮಝರ್‌‌ ಇ ಶರೀಫ್‌ ಮೇಲೆ ಬಿದ್ದಿರುವ ಕಾರಣ ಭಾರತ ತನ್ನ ಪ್ರಜೆಗಳ ಸ್ಥಳಾಂತರಕ್ಕೆ ವಿಶೇಷ ವಿಮಾನದ ಏರ್ಪಾಡು ಮಾಡಿದೆ.

ಮಝರ್‌‌ ಇ ಶರೀಫ್‌‌ ನಗರವನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ಬಗ್ಗೆ ತಾಲಿಬಾನ್‌ ಪ್ರಕಟಣೆ ಹೊರಡಿಸಿತ್ತು.

ಭಾರತೀಯರ ಸ್ಥಳಾಂತರಕ್ಕೆ ನಿಯೋಜಿಸಲಾಗಿರುವ ವಿಮಾನ ಮಝರ್‌‌ ಇ ಶರೀಫ್‌‌ ನಗರದಿಂದ ಇಂದು ಹೊರಡಲಿದೆ. ಈ ಬಗ್ಗೆ ಮಝರ್ ಇ ಶರೀಫ್ ನಗರದಲ್ಲಿನ ಭಾರತೀಯ ದೂತವಾಸ ಕಚೇರಿ ಟ್ವೀಟ್ ಮೂಲಕ ತಿಳಿಸಿದ್ದು, "ಅಫ್ಘಾನಿಸ್ತಾನದಿಂದ ಹೊರಡಲು ಬಯಸುವ ಭಾರತೀಯರು ಆದಷ್ಟು ಬೇಗ ತಮ್ಮ ಕುಟುಂಬದ ವಿವರಗಳನ್ನು ನೀಡಬೇಕು" ಎಂದು ಸೂಚನೆ ನೀಡಿದೆ.

Previous Post Next Post

Contact Form