ಬೆಂಗಳೂರು: ಕರ್ನಾಟಕದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತನುಜಾ ಹೆಸರಿನ ಸಿನೆಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೋವಿಡ್ ನಿಂದಾಗಿ ತನುಜಾ ಎಂಬ ವಿದ್ಯಾರ್ಥಿನಿ ನೀಟ್ ಪರೀಕ್ಷೆ ಬರೆಯಲು ತೊಂದರೆ ಆಗಿತ್ತು. ಆಕೆ ನೀಟ್ ಪರೀಕ್ಷೆ ಬರೆಯುವ ಸಲುವಾಗಿ 350 ಕಿಮೀ ದೂರದಿಂದ ಬಂದಿದ್ದಳು. ತದನಂತರ ಇಬ್ಬರು ಪತ್ರಕರ್ತರ ಸಹಾಯದಿಂದ ಆಕೆ ಪರೀಕ್ಷೆ ಬರೆದು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣಳಾದ ವಿಚಾರ ದೇಶದಲ್ಲೆಡೆ ಸುದ್ದಿಯಾಗಿತ್ತು.
ಇದೇ ಕಥೆಯಿರುವ ಸಿನೆಮಾದಲ್ಲಿ ಇದೀಗ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸುತ್ತಿದ್ದು ಒಂದು ಹಂತದ ಚಿತ್ರೀಕರಣವನ್ನೂ ಮುಗಿಸಿದ್ದಾರೆ ಎನ್ನಲಾಗಿದೆ.