ಕನ್ನಡ ಭವನದ ಬಳಿಯಲ್ಲಿ ಮಟ್ಕಾ ಜೂಜಾಟ: ಆರೋಪಿ ವಶಕ್ಕೆ

(Representational Image)


ಮೂಡುಬಿದಿರೆ: ಇಲ್ಲಿನ ಕನ್ನಡ ಭವನದ ಬಳಿಯಲ್ಲಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರಿನ ಕಿಶನ್ ಸುವರ್ಣ (21) ಆರೋಪಿ. ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ಸಂಜೆ 4.30ರ ವೇಳೆಗೆ ಕನ್ನಡ ಭವನದ ಬಳಿ ಮಟ್ಕಾ ಚೀಟಿ ಬರೆಯುತ್ತಾ, ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ಮಟ್ಕಾ ಬರೆಯುತ್ತಿದ್ದ ಚೀಟಿ ಸಹಿತ 1,100 ರೂ ನಗದು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಮೂಡುಬಿದಿರೆ ಠಾಣೆಗೆ ಹಾಜರುಪಡಿಸಲಾಗಿದೆ.


Previous Post Next Post

Contact Form