ಪಡುಕೊಣಾಜೆ: ಅಪ್ರಾಪ್ತ ಯುವತಿ ನಾಪತ್ತೆ

(Representational Image)


ಮೂಡುಬಿದಿರೆ: ಇಲ್ಲಿನ ಪಡುಕೊಣಾಜೆಯಿಂದ ನೇಪಾಳ ಮೂಲದ ಅಪ್ರಾಪ್ತ ಯುವತಿ ನಾಪತ್ತೆಯಾದ ಘಟನೆ ನಡೆದಿದೆ.

ಈಕೆ ಸೆಕ್ಯೂರಿಟಿ ಗಾರ್ಡ್ ಸಂತೋಷ್ ಅವರ ಮಗಳು. ನೇಪಾಳ ಮೂಲದ ಈ ಕುಟುಂಬ ಕೆಲವು ವರ್ಷಗಳಿಂದ ಪಡುಕೊಣಾಜೆಯಲ್ಲಿ ನೆಲೆಸಿದ್ದು ಹುಡುಗಿಯ ಅಪ್ಪ-ಅಮ್ಮ ಹತ್ತಿರದಲ್ಲೆ ಅಡಿಕೆ ತೋಟವನ್ನು ಕಾಯುವ ಕೆಲಸ ಮಾಡುತ್ತಿದ್ದರು.

ಕೆಲವು ದಿನಗಳ ಹಿಂದೆ ಹತ್ತಿರದ ಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯಕ್ರಮಕ್ಕೆ ಸಂತೋಷ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ತೆರಳಿದ್ದರು. ಆದರೆ ಎರಡನೇ ಮಗಳು ಪೂಜೆಗೆ ಹೋಗದೆ ಮನೆಯಲ್ಲೆ ಉಳಿದಿದ್ದಳು.

ಮನೆಯವರು ಪೂಜೆ ಮುಗಿಸಿ ಅಪರಾಹ್ನ ಮನೆಗೆ ವಾಪಾಸಾದಾಗ ಮಗಳು ಮನೆಯಲ್ಲಿರಲಿಲ್ಲ. ಕೂಲಿ ಕೆಲಸಕ್ಕೆಂದು ಹೊರರಾಜ್ಯದಿಂದ ಬಂದಿದ್ದ ಯುವಕನ ಜತೆ ಈಕೆ ಪರಾರಿಯಾಗಿರಬೇಕೆಂದು ಶಂಕಿಸಲಾಗಿದ್ದು, ಕುಟುಂಬ ಅಪಹರಣದ ಶಂಕೆ ವ್ಯಕ್ತಪಡಿಸಿದೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಬಾಲಕಿಯ ನಾಪತ್ತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


Previous Post Next Post

Contact Form