ಸಿ.ಬಿ.ಎಸ್.ಇ ನಡೆಸುವ 2023-24ನೇ ಸಾಲಿನ ಗ್ರೇಡ್ 10 ರ ಫಲಿತಾಂಶದಲ್ಲಿ ರೋಟರಿ ಕೇಂದ್ರೀಯ ಶಾಲೆಯು ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 36 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 97.22 ಫಲಿತಾಂಶ ದಾಖಲಾಗಿರುತ್ತದೆ. ಈ ಪೈಕಿ ಸಾನ್ವಿ ಬಂಗೇರ 493 (98.60%) ಅಂಕಗಳನ್ನು ಪಡೆದು ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಶಶಾಂಕ್ ಬೋರ್ಕರ್ 480 (96%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಅಶ್ವಿತಾ ಆರ್. ಮತ್ತು ಪ್ರಣತಿ ಆಚಾರ್ಯ 469 (93.80%) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಉತ್ತಮ ಫಲಿತಾಂಶವನ್ನು ದಾಖಲಿಸಿರುವುದಕ್ಕೆ ಎಲ್ಲಾ ವಿದ್ಯಾರ್ಥಿಗಳನ್ನು, ಸಂಸ್ಥೆಯ ಪ್ರಾಂಶುಪಾಲರನ್ನು ಹಾಗೂ ಶಿಕ್ಷಕ ವೃಂದದವರನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಅಧ್ಯಕ್ಷರಾದ ನಾರಾಯಣ ಪಿ.ಎಂ., ಕಾರ್ಯದರ್ಶಿ ಅನಂತಕೃಷ್ಣರಾವ್ ಮತ್ತು ಸಂಚಾಲಕರಾದ ಜೆ.ಡಬ್ಲೂö್ಯ. ಪಿಂಟೋ ಅವರು ಅಭಿನಂದಿಸಿರುತ್ತಾರೆ.