ಕಲ್ಲಬೆಟ್ಟು: 57 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ


ಕಲ್ಲಬೆಟ್ಟು: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಇದರ ವತಿಯಿಂದ 57 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಡಿ.12 ರಂದು ಕಲ್ಲಬೆಟ್ಟು ಸತ್ಯನಾರಾಯಣ ಕಟ್ಟೆಯಲ್ಲಿ ಜರಗಿತು.

ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕ ವಿನಾಯಕ ಭಟ್ ಗಾಳಿಮನೆ ಅವರು ಧಾರ್ಮಿಕ ಉಪನ್ಯಾಸ ನೀಡುತ್ತಾ ಮೊಬೈಲ್ನಲ್ಲೇ ಸಂತೋಷ, ಡಿ.ಜೆ ಕುಣಿತದಲ್ಲೇ ಸಂಭ್ರಮ, ಟಿ.ವಿ ಪರದೆಯಲ್ಲಿ ಬರುವುದೇ ಜ್ಞಾನದ ಮೂಲ ಎಂಬ ಪರಿಸ್ಥಿತಿಯಲ್ಲಿ ನಾವಿದ್ದೇವೆ. “ಸತ್ಯಂ ವದ ಧರ್ಮಂ ಚರ” ಎಂಬ ಮಾತು ನಮ್ಮ ನಾಲಿಗೆಯಲ್ಲಿದೆ. ಆದರೆ ಈ ವಾಣಿ ಆಚರಣೆಯಲ್ಲಿದೆಯೇ ಎಂದು ನಾವು ಪ್ರಶ್ನಿಸಿಕೊಳ್ಳ ಬೇಕಾಗಿದೆ.  ಮನಸ್ಸನ್ನು ಏಕ್ರಾಗತೆಯಲ್ಲಿ ಇಟ್ಟುಕೊಂಡು ಭಗವಂತನಿಗೆ ಶರಣಾಗತನಾಗುವುದೇ ನಿಜವಾದ ಆರಾಧನೆಯಾಗಿದ್ದು ಭಗವಂತನನ್ನು ಕಾಣಲು ಅಂತರAಗದ ಕಣ್ಣನ್ನು ತೆರೆದುಕೊಳ್ಳ ಬೇಕಾಗಿದ್ದು, ನಿಷ್ಕಲ್ಮಶ ಹೃದಯದಲ್ಲಿ ದೇವರು ಸದಾ ವಾಸಿಸುತ್ತಾನೆ ಎಂದರು. 

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಯುವರಾಜ ಜೈನ್ ಮತ್ತು ಪೂಜಾ ಸಮಿತಿಯ ಹಿರಿಯ ಸದಸ್ಯ ನೋಣಯ್ಯ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಹೊಸಂಗಡಿ ಅರಮನೆ ಸುಕುಮಾರ ಶೆಟ್ಟಿ, ಪೂಜಾ ಸಮಿತಿಯ ಸಂಚಾಲಕ ಕೆ. ಸುಂದರ ಶೆಟ್ಟಿ ಉಪಸ್ಥಿತರಿದ್ದರು.

ಅಧ್ಯಕ್ಷ ಎಂ ಬಾಹುಬಲಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪಿ.ರಮೇಶ್ ಚಂದ್ರ ವರದಿ ವಾಚಿಸಿದರು. ಖಜಾಂಚಿ ಕೆ. ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕು.ಸುಮಾ ಪಿ ಪೈ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ನಂತರ ದಿಲೀಪ್ ಕುಮಾರ್ ಶೆಟ್ಟಿ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಪಾಪಣ್ಣ ವಿಜಯ ಗುಣಸುಂದರಿ’ ತುಳು ಯಕ್ಷಗಾನ ಪ್ರದರ್ಶನಗೊಂಡಿತು.

Kallabettu: Public Shree Satyanarayana Pooja Committee organized the 57th annual Shree Satyanarayana Pooja on December 12 at Kallabettu Satyanarayana Katte.

Previous Post Next Post

Contact Form