ಇರುವೈಲು‌ ಡಾ.ಕೃಷ್ಣಮೂರ್ತಿ ನಿಧನ


ಮೂಡುಬಿದಿರೆ: ಇರುವೈಲು ಗ್ರಾಮದ ದಂಬೆಕೋಡಿ ನಿವಾಸಿ ಡಾ. ಕೃಷ್ಣ ಮೂರ್ತಿ (95) ಶನಿವಾರ ಸ್ವಗೃಹದಲ್ಲಿ ನಿಧನರಾದರು. ಪತ್ನಿ,ಪುತ್ರ, ಇಬ್ಬರು ಪುತ್ರಿಯರನ್ನು  ಅಗಲಿದ್ದಾರೆ.

3 ಅವಧಿಗೆ ಇರುವೈಲು‌ ಮಂಡಲ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಕೇರಳದ ಎರ್ನಾಕುಲಂನಲ್ಲಿ ಆಯುರ್ವೇದ ಮೆಡಿಕಲ್ ವ್ಯಾಸಂಗ ಮಾಡಿ ಊರಿನ ಜನರಿಗೆ ಸುಮಾರು ಐದು ದಶಕಗಳ ವೈದ್ಯಕೀಯ ಸೇವೆ ನೀಡಿದ್ದಾರೆ. ಇರುವೈಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಪವಿತ್ರಪಾಣಿಯಾಗಿ ಸೇವೆ ಸಲ್ಲಿಸಿದ್ದರು. ಇರುವೈಲ್ ಮೇಳದಲ್ಲಿ ಹಲವು ವರ್ಷ ಚೆಂಡೆವಾದಕರಾಗಿದ್ದರು

Previous Post Next Post

Contact Form