ಐವನ್ ಡಿಸೋಜಾ ಅವರಿಂದ ಸುಮಾರು 11 ಲಕ್ಷ ರೂ. ಪರಿಹಾರಧನ ವಿತರಣೆ

ಮೂಡುಬಿದಿರೆ: ವಿವಿಧ ಕಾಯಿಲೆಯಿಂದ ಬಳಲುತ್ತಿರುವ ೧೬ ಜನ ಅರ್ಜಿದಾರರಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ನೀಡಿರುವ 11 ಲಕ್ಷದ ಪರಿಹಾರ ಧನದ ಚೆಕ್ಕನ್ನು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ’ಸೋಜಾ ಅವರು ಮೂಡುಬಿದಿರೆಯಲ್ಲಿರುವ ತನ್ನ ಕಛೇರಿ ಜನ ಸ್ಪಂದನದಲ್ಲಿ ಗುರುವಾರ ಹಸ್ತಾಂತರಿಸಿದರು. 
Ivan Dsouza Distributing Cheque

ಅರ್ಜಿದಾರರಾದ  ಪ್ರತಾಪ್ ಮಂಗಳೂರು (೨ಲಕ್ಷ), ಶಿವಾನಂದ ಶೆಟ್ಟಿ ಪಡೀಲ್ (೧.೭೫ಲಕ್ಷ), ಜೆಸಿಂತಾ ಪಿಂಟೋ (೧.೭೫ಲಕ್ಷ), ವಿದ್ಯಾ ಅಂಗರಗುಂಡಿ ಮಂಗಳೂರು (೧ಲಕ್ಷ), ಸತೀಶ್ ಕುಮಾರ್ ಕುಲಶೇಖರ (೮೦ ಸಾವಿರ), ಗ್ರೆಶನ್ ಎಲ್.ಚೀರನ್ ಮಂಗಳೂರು (೫೭,೫೯೩), ಗೋಡ್ವಿನ್ ವಿಕ್ಟರ್ ಪಿಂಟೋ (೫೦ ಸಾವಿರ), ನಸೀಮ ದೇರಳಕಟ್ಟೆ (೪೦ ಸಾವಿರ), ಮಹಮ್ಮದ್ ಇಸ್ಮಾಯಿಲ್ ಉಳ್ಳಾಲ (೪೦ ಸಾವಿರ), ದಯಾವತಿ ಕಾಟಿಪಳ್ಳ (೪೦ ಸಾವಿರ), ಅಬ್ದುಲ್ ಲತೀಫ್ ಪುತ್ತೂರು (೩೦ ಸಾವಿರ), ಬಿ.ಎಸ್.ಹಸನಬ್ಬ ಕೊಣಾಜೆ (೨೬,೬೩೧), ಮಾ.ಆದಿತ್ಯ ಡಿ.ಕಾರ್ಕಳ (೨೪,೮೭೯), ದೀಪಕ್ ಕುಮಾರ್ ಮಂಗಳೂರು (೧೮,೭೩೬), ಮಹಮ್ಮದ್ ಬಶೀರ್ ಬೆಳ್ತಂಗಡಿ (೯,೭೭೬) ಹಾಗೂ ಬಿ.ಮಹಮ್ಮದ್ ಅವರಿಗೆ ೬,೪೫೦ ರ ಚೆಕ್‌ನ್ನು ವಿತರಿಸಲಾಯಿತು. 
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಗುರುರಾಜ್, ಪುರಸಭಾ ನಾಮ ನಿರ್ದೇಶಿತ ಸದಸ್ಯ ಆಲ್ವಿನ್ ಮಿನೇಜಸ್, ಜಿ.ಪಂ ಮಾಜಿ ಸದಸ್ಯ ಲಾಜರಸ್ ಡಿ’ಕೋಸ್ತಾ, ತಾ.ಪಂ ಮಾಜಿ ಸದಸ್ಯ ಪ್ರಕಾಶ್ ಪಿ., ಹೊಸಬೆಟ್ಟು ಗ್ರಾ.ಪಂ ಮಾಜಿ ಸದಸ್ಯರಾದ ವಿಲ್ಫ್ರೆಡ್ ಮೆಂಡೋನ್ಸಾ, ರೊನಾಲ್ಡ್ ಸೆರಾವೋ, ಕ್ಯಾಥೋಲಿಕ್ ಸಭಾ ಮೂಡುಬಿದಿರೆ ವಲಯಾಧ್ಯಕ್ಷ ಹೆರಾಲ್ಡ್ ರೇಗೋ ಮತ್ತಿತರರು ಉಪಸ್ಥಿತರಿದ್ದರು.
Previous Post Next Post

Contact Form