ಸಂಪಿಗೆಯಲ್ಲಿ ರಿಕ್ಷಾ ತಂಗುದಾಣ ಉದ್ಘಾಟಿಸಿದ ಐವನ್ ಡಿಸೋಜಾ

ಮೂಡುಬಿದಿರೆ: ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ ಅವರ ೨೦೧೭-೧೮ನೇ ಸಾಲಿನ ಪ್ರದೇಶಭಿವೃದ್ದಿ ನಿಧಿಯಿಂದ ಸುಮಾರು ೨.೦೦ ಲಕ್ಷ ಅನುದಾನದಿಂದ ಮೂಡುಬಿದಿರೆ ಸಮೀಪದ ಸಂಪಿಗೆ (ಅಶ್ವಥಪುರ) ಎಂಬಲ್ಲಿ ಇಂಟರ್‌ಲಾಕ್ ಮತ್ತು ರಿಕ್ಷಾ ತಂಗುದಾಣದ ಮೇಲ್ಛಾವಣಿಯನ್ನು ನಿರ್ಮಿಸಲಾಗಿದ್ದು ಇದನ್ನು ಐವನ್ ಡಿ’ಸೋಜಾ ಅವರು ಉದ್ಘಾಟಿಸಿದರು.


ಈ ಸಂದರ್ಭ ಮಾತನಾಡಿದ ಅವರು ’ರಿಕ್ಷಾ ಚಾಲಕರು ಸೇನಾನಿಗಳಿದ್ದಂತೆ, ಯಾವುದೇ ಸಮಾಯವಿರಲಿ ಅವರು ಜನತೆಯ ಸೇವೆಗೆ ಸಿದ್ಧರಿರುತ್ತಾರೆ. ರಿಕ್ಷಾ ಚಾಲಕರು ನಿಸ್ಪಾರ್ಥ ಸೇವೆಯಿಂದ ಜನರಲ್ಲಿ ವಿಶ್ವಾಸ ಮೂಡಿಸಬೇಕು’ ಎಂದು ಹೇಳಿದರು.
ಕೆ.ಪಿ.ಸಿ.ಸಿ ಸದಸ್ಯರಾದ  ಗುರುರಾಜ್, ಜಿಲ್ಲಾ ಪಂಚಾಯತ್ ಸದಸ್ಯ ಸುಚರಿತ ಶೆಟ್ಟಿ, ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ನಾಗರಾಜ್ ಕರ್ಕೆರಾ, ನಾಗವರ್ಮ ಜೈನ್, ರಾಘು ಕೊಟ್ಯಾನ್, ಕಲ್ಲಮುಂಡ್ಕೂರು ಪಂಚಾಯತ್ ಸದಸ್ಯ ಸತೀಶ್ ಅಮೀನ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಲಾಜರಸ್ ಡಿಕೋಸ್ತಾ, ಸಂಪಿಗೆ ಶಾಲಾ ಶಿಕ್ಷಕ ನಾಗರಾಜ್ ರಾವ್, ರಿಕ್ಷಾ ಕಾರ್ಯದರ್ಶಿ ರವಿಶಂಕರ್ ಭಟ್, ನವೀನ್ ದೇವಾಡಿಗ, ಕರುಣಾಕರ, ಬಿ.ಎಮ್.ಎಲ್ ದಿನೇಶ್ ಭಟ್, ಮೊನಪ್ಪ ಸಂಪಿಗೆ, ವಿಶ್ವರಾಜ್ ಕರ್ಕೆರಾ. ಅರುಣ್ ಕುಲಾಲ್, ಜಯಕುಮಾರ್, ತುಕರಾಮ್‌ಕರ್ಕೆರಾ, ಗಿಲ್ಬರ್ಟ್ ಪಿಂಟೋ, ಸಂತೋಷ್ ಶೆಟ್ಟಿ, ಅಶೋಕ್ ಪೂಜಾರಿ, ವಕೀಲ ಪದ್ಮ ಪ್ರಸಾದ್ ಜೈನ್ ಉಪಸ್ಥಿತರಿದ್ದರು. 
Previous Post Next Post

Contact Form