ಕಸ್ತೂರಿ ಮಾತ್ರೆ ಮಾರುವವನಿಂದ ಅತ್ಯಾಚಾರ ಯತ್ನ ಆರೋಪ

ಮೂಡುಬಿದಿರೆ: ಆತ ಗುರುವಾರ ಕೊಳಂಬೆ ಗ್ರಾಮದ ಕಜೆಕೋಡು ಹೌಸ್ ಪ್ರದೇಶದಲ್ಲಿ ಕಸ್ತೂರಿ ಮಾತ್ರೆ ಮಾರುತ್ತಾ ಬಂದಿದ್ದ. ಈ ಸಂದರ್ಭ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.


ಕಜೆಕೋಡಿ ಹೌಸ್ ಎಂಬಲ್ಲಿ ಬೆಳಿಗ್ಗೆ 11ಗಂಟೆಗೆ ಕಸ್ತೂರಿ ಮಾತ್ರೆ ಗಳನ್ನು ಮಾರಾಟ ಮಾಡಲು ಬಂದ ಮೊಹಮ್ಮದ್ ಇಕ್ಬಾಲ್ ಮಹಿಳೆಯ ಕೈ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ ಎಂದು ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಆರೋಪಿಯನ್ನು ಮುಲ್ಕಿ ಕೆಂಚನಕೆರೆ ನಿವಾಸಿ ಮೊಹಮ್ಮದ್ ಇಕ್ಬಾಲ್ (52) ಎಂದು ಗುರುತಿಸಲಾಗಿದೆ.

Previous Post Next Post

Contact Form