ನಾಪತ್ತೆಯಾಗಿದ್ದ ಟ್ರಾಫಿಕ್ ಎಎಸ್‌ಐ ಶವವಾಗಿ ಪತ್ತೆ


ಮಡಿಕೇರಿ: ಇತ್ತೀಚೆಗೆ ನಾಪತ್ತೆಯಾಗಿದ್ದ ಮಡಿಕೇರಿಯ ಕುಶಾಲನಗರದ ಟ್ರಾಫಿಕ್‌ ಎಎಸ್‌ಐ ಇದೀಗಾ ಶವವಾಗಿ ಪತ್ತೆಯಾಗಿದ್ದಾರೆ. ಈ ಪ್ರಕರಣ ಇದೀಗ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಕೊಡಗು ಜಿಲ್ಲೆಯ ಕುಶಾಲನಗದದಲ್ಲಿ ಟ್ರಾಫಿಕ್‌ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತದ್ದ ಸುರೇಶ್‌ (51) ಜನವರಿ 27ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ನೀಡಿದ ದೂರಿನ ಅನ್ವಯ ಪೊಲೀಸರು ಹುಡುಕಾಟವನ್ನು ನಡೆಸುತ್ತಿದ್ದರು.ಆದರೂ ಅವರ ಸುಳಿವಿರಲಿಲ್ಲ.

ಇದೀಗ ಹಾಸನದ ಕಾಡ್ಲೂರು ಬಳಿಯ ಕಾವೇರಿ ನದಿಯಲ್ಲಿ ಸುರೇಶ್‌ ಶವವಾಗಿ ಪತ್ತೆಯಾಗಿದ್ದಾರೆ.

ಈ ಪ್ರಕರಣದ ಬಗ್ಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Previous Post Next Post

Contact Form