ಕಲಾಂಗಣದಲ್ಲಿ ರಜಾ ಶಿಬಿರ


ಮೂಡುಬಿದಿರೆ: 
ಮಾಂಡ್ ಸೊಭಾಣ್ ಇದೇ ಎಪ್ರಿಲ್ 22 ರಿಂದ ಮೇ 01 ರ ವರೆಗೆ ಮಕ್ಕಳಿಗಾಗಿ `ಕಿರ್ಣಾಂ’-ವಸತಿಯುತ ರಜಾ ಶಿಬಿರವನ್ನು ಆಯೋಜಿಸಿದೆ. ಗಾಯನ, ನೃತ್ಯ, ನಾಟಕ ಹೀಗೆ ಮೂರು ವಿಭಾಗಗಳಿದ್ದು ಆಸಕ್ತಿಯ ಯಾವುದೇ ವಿಭಾಗವನ್ನು ಆಯ್ದುಕೊಳ್ಳಬಹುದು. ಇದಲ್ಲದೇ ಕೊಂಕಣಿ ಭಾಷೆ ಮತ್ತು ಸಂಸ್ಕøತಿ, ಭಾಷಣ ಕಲೆ, ಕಾರ್ಯಕ್ರಮ ನಿರೂಪಣೆ ಬಗ್ಗೆ ಶಿಬಿರದಲ್ಲಿ ಕಲಿಸಲಾಗುವುದು. ಶಿಬಿರದಲ್ಲಿ ಕಲಿತುದನ್ನು ಮೇ 01 ರಂದು ಪ್ರಸ್ತುತವಾಗುವ 245ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ಸುವರ್ಣಾವಕಾಶ ಲಭಿಸಲಿದೆ.

ಈ ಸಾಲಿನಲ್ಲಿ 7 ರಿಂದ 10 ನೇ ತರಗತಿವರೆಗೆ ಕಲಿತ ಮಕ್ಕಳಿಗಾಗಿ ಸೀಮಿತ ಸಂಖ್ಯೆಯ ಅವಕಾಶವಿದ್ದು, ಎಪ್ರಿಲ್ 13 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೆಸರು ನೋಂದಾಯಿಸಲು ಮತ್ತು ಇತರ ಮಾಹಿತಿಗಾಗಿ ಕಲಾಂಗಣ ಕಛೇರಿಯನ್ನು (8105226626) ಸಂಪರ್ಕಿಸಲು ಕೋರಲಾಗಿದೆ.

Previous Post Next Post

Contact Form