ಮಂಗಳೂರು: ವಿಷಪೂರಿತ ಅಣಬೆ ತಿಂದು ಕಳೆದ 2 ದಿನಗಳಲ್ಲಿ ಕನಿಷ್ಟ 13 ಮಂದಿ ಅಸುನೀಗಿದ ಧಾರುಣ ಘಟನೆ ನಡೆದಿದೆ. ಉತ್ತರ ಅಸ್ಸಾಂನ 4 ಜಿಲ್ಲೆಗಳ 35 ಜನರು ವಿಷಪೂರಿತ ಅಣಬೆ ತಿಂದು ಅಸ್ವಸ್ಥರಾಗಿದ್ದು, ಅವರಲ್ಲಿ 13 ಜನರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಸೋಮವಾರದಂದು 4 ಜನರು ಮೃತಪಟ್ಟರೆ, ಮಂಗಳವಾರದಂದು 9 ಜನರು ಮೃತಪಟ್ಟಿದ್ದಾರೆ. ಆಹಾರ ಅಣಬೆಗಳೆಂದು ಭಾವಿಸಿ, ವಿಷಪೂರಿತ ಅಣಬೆ ಸೇವಿಸಿದವರಲ್ಲಿ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಮೃತಪಟ್ಟವರಲ್ಲಿ 7 ವರ್ಷದ ಮಗುವೂ ಸೇರಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಟೀ ಕಾರ್ಮಿಕರಾಗಿದ್ದಾರೆ.