ಕಾರು ಅಪಘಾತ: ಸೋನು ಶ್ರೀನಿವಾಸ್ ಗೌಡ ಆಸ್ಪತ್ರೆ ದಾಖಲು


ಟಿಕ್ ಟಾಕ್ ಮೂಲಕ ಸಖತ್ ಫೇಮಸ್ ಆಗಿರುವ ಮತ್ತು ಬಿಗ್ ಬಾಸ್ (Big Boss) ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಕಾರನ್ನು (Car) ತೆಗೆಯಲು ಹೋಗಿ ಪಿಲ್ಲರ್ ಗೆ ಕಾರು ಗುದ್ದಿಸಿದ್ದಾರೆ ಎನ್ನುವ ಮಾಹಿತಿ ಇದೆ. ಬ್ರೇಕ್ ತುಳಿಯಲು ಹೋಗಿ ಎಕ್ಸಿಲೇಟರ್ ತುಳಿದದ್ದು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮಾಹಿತಿಗಳ ಪ್ರಕಾರ ಸೋನು ಇತ್ತೀಚೆಗಷ್ಟೇ ಕಾರು ಕಲಿಯಲು ಆರಂಭಿಸಿದ್ದಾರಂತೆ. ಹಾಗಾಗಿ ಎಕ್ಸಿಲೇಟರ್ ಮತ್ತು ಬ್ರೇಕ್ ನಡುವಿನ ಗೊಂದಲದಿಂದಾಗಿ ಅಪಾರ್ಟ್ ಮೆಂಟ್ ನ ಪಿಲ್ಲರ್ ಗೆ ಕಾರು ಗುದ್ದಿಸಿದ್ದಾರೆ. ಕೈಗೆ ಮತ್ತು ಕಾಲುಗಳಿಗೆ ಸಣ್ಣಪುಟ್ಟ ಏಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಿವೆ ಮೂಲಕಗಳು.

ಕಾರನ್ನು ಅವರೇ ಚಲಾಯಿಸುತ್ತಿದ್ದರೋ ಅಥವಾ ಬೇರೆ ಯಾರಾದರೋ ಚಲಾಯಿಸುತ್ತಿದ್ದರೋ ಎನ್ನುವುದಕ್ಕೆ ಸ್ಪಷ್ಟ ಮಾಹಿತಿ ಇಲ್ಲ. ಗುದ್ದಿದ ರಭಸಕ್ಕಂತೂ ಕಾರು ನುಜ್ಜುಗುಜ್ಜಾಗಿದೆಯಂತೆ.

ಹಾಟ್ ಹಾಟ್ ಫೋಟೋ ಶೂಟ್ ಗಳ ಮೂಲಕವೇ ಸಖತ್ ಫೇಮಸ್ ಆದವರು ಸೋನು. ಟಿಕ್ ಟಾಕ್ ಇದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಇವರ ವಿಡಿಯೋಗಳು ಸಖತ್ ವೈರಲ್ ಕೂಡ ಆಗಿದ್ದವು. ಈ ಜನಪ್ರಿಯತೆಯೇ ಅವರನ್ನು ಬಿಗ್ ಬಾಸ್ ಮನೆಗೆ ಕರೆದುಕೊಂಡು ಹೋಗಿತ್ತು.


Previous Post Next Post

Contact Form