ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು


ಮೂಡುಬಿದಿರೆ : ಕಾಲೇಜು ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಕಾರ್ಯಕರ್ತೆಯೊಬ್ಬರ ಪುತ್ರಿ ಅವರ ನಿವಾಸದಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಸಾವಿಗೀಡಾದ ಯುವತಿಯನ್ನು 20 ವರ್ಷದ ಪ್ರಭುಧ್ಯ ಎಂದು ಗುರುತಿಸಲಾಗಿದ್ದು, ಆಕೆಯ ಕುತ್ತಿಗೆ ಸೀಳಿದ ಮತ್ತು ಆಕೆಯ ಕೈಗಳ ಮೇಲೆ ಕತ್ತರಿಸಿದ ಗುರುತುಗಳು ಕಂಡುಬಂದಿವೆ. ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.

ಬಾಲಕಿಯ ತಾಯಿ ಸೌಮ್ಯಾ, ''ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನೋಸ್ಥಿತಿಯವಳಲ್ಲ. ಆಕೆಯ ಮೊಬೈಲ್ ಫೋನ್ ಕಾಣೆಯಾಗಿದ್ದು, ಮನೆಯ ಹಿಂಬಾಗಿಲು ತೆರೆದಿತ್ತು. ಇದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಾನು ಅನೇಕ ಮಕ್ಕಳನ್ನು ರಕ್ಷಿಸಿದ್ದೇನೆ, ಪ್ರಮುಖ ರಾಜಕಾರಣಿಗಳ ವಿರುದ್ಧ ಧ್ವನಿ ಎತ್ತಿದ್ದೇನೆ ಮತ್ತು ವ್ಯವಸ್ಥೆಯನ್ನು ಪ್ರಶ್ನಿಸಿದ್ದೇನೆ. ಇದನ್ನು ಯಾರು ಮಾಡಿರಬಹುದು ಎಂದು ನನಗೆ ಅರ್ಥವಾಗುತ್ತಿಲ್ಲ.

ನನ್ನ ಮಗಳು ತನ್ನ ಚಲನವಲನಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತಿದ್ದಳು. ನಿನ್ನೆ ಕಾಲೇಜು ಮುಗಿಸಿ ಮನೆಗೆ ಮರಳಿದ್ದಳು. ನನ್ನ ಮಗಳಿಗೆ ಸ್ವಾಭಿಮಾನ, ನೈತಿಕತೆ, ಧೈರ್ಯ ತುಂಬಿ ಬೆಳೆಸಿದ್ದೇನೆ. ಈಗ ನನ್ನ 20 ವರ್ಷದ ಮಗಳು ನನ್ನ ಮುಂದೆ ಸತ್ತಿದ್ದಾಳೆ ಎಂದು ಸೌಮ್ಯಾ ಹೇಳಿದ್ದಾರೆ. 

ಬಾತ್ ರೂಮ್ ನಲ್ಲಿ ಸಂತ್ರಸ್ತೆ ಪತ್ತೆಯಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.

ಯುವತಿಯ ಮೃತದೇಹ ಕುತ್ತಿಗೆ ಮತ್ತು ಕೈಗಳ ಮೇಲೆ ಗಾಯಗಳು ಕಂಡುಬಂದಿವೆ ಎಂದು ದಕ್ಷಿಣ ಡಿಸಿಪಿ ಎಸ್.ಲೋಕೇಶ್ ಜಗಲ್ಸರ್ ತಿಳಿಸಿದ್ದಾರೆ. "ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಮತ್ತು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು.

Previous Post Next Post

Contact Form