42 ಮಹಿಳೆಯರನ್ನು ಕೊಂದ ಸರಣಿ ಹಂತಕ ಕಸ್ಟಡಿಯಿಂದ ಪರಾರಿ


ಕಳೆದ ಎರಡು ವರ್ಷಗಳಲ್ಲಿ 42 ಮಹಿಳೆಯರನ್ನು ಕೊಂದು ಅವರ ದೇಹವನ್ನು ಎಸೆದಿದ್ದಾಗಿ ಒಪ್ಪಿಕೊಂಡಿದ್ದ ಕಾಲಿನ್ಸ್ ಖಲುಶಾ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡು ಹೋಗಿದ್ದಾನೆ.

ಕೀನ್ಯಾದ ರಾಜಧಾನಿ ನೈರೋಬಿಯ ಕಾಸಿ ಸೌತ್‌ನಲ್ಲಿ ತುಂಡರಿಸಿದ ಶವಗಳು ಪತ್ತೆಯಾದ ನಂತರ ಜುಲೈನಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.

ಗಾರ್ಡಿಯನ್ ವರದಿಯ ಪ್ರಕಾರ, ದೇಹದ ಭಾಗಗಳೊಂದಿಗೆ ಕನಿಷ್ಠ 10 ಗೋಣಿಚೀಲಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದ್ದಾರೆ.

ಮಂಗಳವಾರ (ಆಗಸ್ಟ್ 20) ಜೈಲಿನಿಂದ ಹೊರಬರುವಲ್ಲಿ ಯಶಸ್ವಿಯಾದ 13 ಮಂದಿಯಲ್ಲಿ 33 ವರ್ಷದ ಕೈದಿಯೂ ಒಬ್ಬರು. ಇತರ ಬಂಧಿತರು ಎರಿಟ್ರಿಯನ್ನರಾಗಿದ್ದು, ಅವರು ಅಕ್ರಮವಾಗಿ ಕೀನ್ಯಾದಲ್ಲಿದ್ದಾರೆ ಎಂದು ಆರೋಪಿಸಲಾಗಿತ್ತು.

ಖಲುಶಾ ಮತ್ತು ಇತರ ಬಂಧಿತರು "ಬಾಸ್ಕಿಂಗ್ ಬೇ" ಯಲ್ಲಿ ಭದ್ರತಾ ತಂತಿ ಜಾಲರಿಯನ್ನು ಕತ್ತರಿಸಿ ಸುತ್ತುವರಿದ ಗೋಡೆಯನ್ನು ಹತ್ತಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Previous Post Next Post

Contact Form