ಕುಡಿದು ಪೊಲೀಸರೊಂದಿಗೆ ಕಿರಿಕ್: ಮೂವರ ವಿರುದ್ಧ ಪ್ರಕರಣ ದಾಖಲು

ಮೂಡುಬಿದಿರೆ: ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದವರನ್ನು ಪರಿಶೀಲಿಸಲು ನಿಲ್ಲಿಸಿದಾಗ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಅವಾಂತರ ಸೃಷ್ಠಿಸಿದ ಮೂರು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಚರ್ಚೆಯಾಗುತ್ತಿತ್ತು.


ಗುರುವಾರ ಸಂಜೆ ಮೂಡುಬಿದಿರೆ ಪೊಲೀಸರು ಬೀಟ್‌ನಲ್ಲಿರುವ ಸಂದರ್ಭ ದ್ವಿಚಕ್ರ ವಾಹನದಲ್ಲಿ ಹೆಲ್ಮಟ್ ಹಾಕದೆ ಹೋಗುತ್ತಿದ್ದ ಒಂಟಿಕಟ್ಟೆಯ ಪ್ರಕಾಶ್ ಕೋಟ್ಯಾನ್ ಮತ್ತು ಸತ್ತಾರ್‌ನನ್ನು ಪೊಲೀಸ್ ಉಪನಿರೀಕ್ಷಕ ಕೃಷ್ಣಪ್ಪ ಅವರು ನಿಲ್ಲಿಸಿ ದ್ವಿಚಕ್ರ ವಾಹನದ ದಾಖಲೆಗಳನ್ನು ನೀಡುವಂತೆ ಕೇಳಿದ್ದಾರೆ. ಆಗ ದಾಖಲೆ ಇಲ್ಲ ನಾಳೆ ತಂದು ಕೊಡುವುದಾಗಿ ತಿಳಿಸಿದ್ದಾರೆ. ಇದೇ ಸಂದರ್ಭ ಏಕಮುಖ ರಸ್ತೆಯಲ್ಲಿ ಇನ್ನೊಂದು ವಾಹನ ಬಂದಿದ್ದು ಅವರಿಗೂ  ಗಾಡಿಯನ್ನು ಸೈಡಿನಲ್ಲಿ ನಿಲ್ಲಿಸುವಂತೆ ಸೂಚಿಸಿದಾಗ ಅವರೂ ನಮ್ಮ ಸಂಬAಧಿಕರೆAದು ಪ್ರಕಾಶ್ ದರ್ಪದಿಂದ ಹೇಳಿದ್ದಲ್ಲದೆ ಬೈಕ್‌ನಲ್ಲಿ ತ್ರಿಬಲ್ ರೈಡ್ ಹೊರಟಿದ್ದರು. ಆಗ ಮತ್ತೆ ಪೊಲೀಸರು ಮತ್ತು ಮೂವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಪ್ರಕಾಶ್, ವಿಜೇತ್ ಮತ್ತು ಸತ್ತಾರ್ ಮೂವರು ಸೇರಿ ಪೊಲೀಸರಿಗೆ ಏರು ಧ್ವನಿಯಲ್ಲಿ ಮಾತನಾಡಿ ಸಾರ್ವಜನಿಕ ಶಾಂತಿ ಭಂಗ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಪರ ವಿರೋಧ ಚರ್ಚೆ ನಡೆದಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಮೂವರು ಠಾಣೆಗೆ ಕರೆದುಕೊಂಡು ಹೋಗಿದ್ದು ನಂತರ ಪ್ರಕಾಶ್ ಮತ್ತು ವಿಜೇತ್‌ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು ಅವರು ಅಮಲು ಪದಾರ್ಥ ಸೇವಿಸಿರುವುದು ಸಾಬೀತಾಗಿದ್ದು ಡ್ರಿಂಕ್ & ಡ್ರೈವ್ ಕೇಸು ದಾಖಲಾಗಿದೆ. ಸಾರ್ವಜನಿಕವಾಗಿ ಶಾಂತಿ ಭಂಗ ಮಾಡಿರುವ ಹಿನ್ನೆಲೆಯಲ್ಲಿ ಮೂವರು ಕೂಡಾ ತಲಾ 1 ಲಕ್ಷದ ಬಾಂಡ್ ನೀಡಬೇಕಾಗಿದೆ.

Previous Post Next Post

Contact Form