ಮೂಡುಬಿದಿರೆ: ಪುತ್ತಿಗೆ ಗ್ರಾಮದ ಮುಲ್ಕಿ ಕ್ರಾಸ್ ಎಂಬಲ್ಲಿ ಜಯಶ್ರೀ ಸ್ಟೋರ್ ಎಂಬ ಗೂಡಂಗಡಿಯಿಂದ ಕಳ್ಳತನ ಮಾಡಿದ್ದ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ರಿ ಆರೋಪಿಗಳು ಕಳೆದ 3 ವರ್ಷಗಳಿಂದ ಮೂಲ್ಕಿ, ಬಜ್ಪೆ, ಕಾರ್ಕಳ ಮತ್ತು ವೇಣೂರು ಠಾಣಾ ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಗೂಡಂಗಡಿಗಳಿಂದ ವಸ್ತುಗಳನ್ನು ಕಳವು ಮಾಡಿದ್ದಾರೆನ್ನಲಾಗಿದೆ. ರೋಶನ್ ವಿಲ್ಸನ್ ಕ್ವಾಡ್ರಸ್ (37), ನಿಶಾಂಕ್ ಪೂಜಾರಿ (18) ಮತ್ತು ರೋಹಿತ್ ಮಸ್ಕರೇನ್ಹಸ್ (21) ಬಂಧಿತ ಆರೋಪಿಗಳು.
ಜನವರಿ 9ರ ರಾತ್ರಿ ಗೂಡಂಗಡಿಯ ಮೇಲ್ಚಾವಣಿಯ ಶೀಟು ತೆಗೆದು, ಬೀಗ ಒಡೆದು ಸುಮಾರು 20 ಸಾವಿರ ರೂಪಾಯಿ ನಗದು ಮತ್ತು 48 ಸಾವಿರ ರೂಪಾಯಿ ಮೌಲ್ಯದ ಸಿಗರೇಟು, ನೀರಿನ ಬಾಟಲು, ತಂಪು ಪಾನೀಯ ಬಿಸ್ಕಿಟ್, ತಿಂಡಿ ಇತ್ಯಾದಿಗಳನ್ನು ಕಳುವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಮೂಡುಬಿದಿರೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಹ್ಯುಂಡೈ ಎಕ್ಸೆಂಟ್ ಕಾರು, ಆ್ಯಕ್ಟೀವಾ ಸ್ಕೂಟರ್ ಹಾಗೂ 5 ಸಾವಿರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 3 ಲಕ್ಷದ 55 ಸಾವಿರ ಆಗಿರುತ್ತದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿಜಿ ನೇತೃತ್ವದಲ್ಲಿ, ನವೀನ್ ಪಿಎಸ್ಐ, ರಾಜೇಶ್ ಎಎಸ್ಐ, ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಗಳಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ಪ್ರದೀಪ್, ವೆಂಕಟೇಶ್, ಸತೀಶ್, ರಾಜೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Moodbidri: The accused who had stolen from a petty shop named Jayashree Store at Mulki Cross in Puttige village have been arrested by the Moodbidire police. It is said that the accused have stolen goods from more than 25 shops in Mulki, Bajpe, Karkala and Venur police stations for the past 3 years. Roshan Wilson Quadras (37), Nishank Pujari (18) and Rohit Mascarenhas (21) are the arrested accused.