ಬ್ಯಾಟರಿ ಕಳ್ಳರ ಬಂಧನ: ಪೊಲೀಸರನ್ನು ಶ್ಲಾಘಿಸಿದ ಅಥ್೯ಮೂವರ್ಸ್ ಅಸೋಸಿಯೇಷನ್



ಮೂಡುಬಿದಿರೆಯಲ್ಲಿ ಕಳೆದ ಕೆಲವು ಸಮಯಗಳಿಂದ ಹಿಟಾಚಿ, ಟಿಪ್ಪರ್ ಗಳಿಂದ ಬ್ಯಾಟರಿಗಳನ್ನು ಕಳವುಗೈಯುತ್ತಿದ್ದ ಆರೋಪಿಗಳನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದ ತಂಡವು ಬಂಧಿಸಿರುವುದನ್ನು ಅಥ್೯ ಮೂವರ್ಸ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ತೋಡಾರು ರಂಜಿತ್ ಪೂಜಾರಿ ಮತ್ತು ಉಪಾಧ್ಯಕ್ಷ ರೋಹನ್ ಕಾರ್ಡೋಜಾ ಅವರು ಶ್ಲಾಘಿಸಿದ್ದಾರೆ.

 ಇತ್ತೀಚಿನ ದಿನಗಳಲ್ಲಿ ಹಿಟಾಚಿ, ಟಿಪ್ಪರ್ ಮುಂತಾದ ವಾಹನಗಳಿಗೆ ಕೆಲಸಗಳು ಕಡಿಮೆಯಾಗುತ್ತಿದ್ದು ವಾಹನದ ಮಾಲಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ವಾಹನಗಳಿಂದ  ಬ್ಯಾಟರಿಗಳು ಕಳವು ಆದಾಗ ವಾಹನಗಳ ಯಜಮಾನರುಗಳು ಕಂಗಾಲಾಗಿದ್ದು ಅಸೋಸಿಯೇಶನ್ನಿಗೆ ದೂರು ನೀಡಿದ್ದರು. ನಿಟ್ಟಿನಲ್ಲಿ ಅಸೋಸಿಯೇಶನ್ ಪೊಲೀಸರಿಗೆ ದೂರು ನೀಡಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ, ವ್ಯಾಪಕ ತನಿಖೆ ನಡೆಸಿ ಬ್ಯಾಟರಿ ಕಳ್ಳತನದ ಆರೋಪಿಗಳನ್ನು ಬಂಧಿಸಿರುವುದಕ್ಕೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದ ತಂಡಕ್ಕೆ ಅಥ್೯ ಮೂವರ್ಸ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ತೋಡಾರು ರಂಜಿತ್ ಪೂಜಾರಿ, ಉಪಾಧ್ಯಕ್ಷ ರೋಹನ್ ಕಾರ್ಡೋಜಾ, ಕೇಂದ್ರ ಸಮಿತಿ ಗೌರವಾಧ್ಯಕ್ಷ ಆದಿರಾಜ ಜೈನ್, ಅಧ್ಯಕ್ಷ ವಿನಯ್ ಹೆಗ್ಡೆ ನಾರಾವಿ, ಕಾರ್ಯದರ್ಶಿ ರಾಕೇಶ್ ಅವರು ಶ್ಲಾಘನೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.

Previous Post Next Post

Contact Form