ಮೂಡುಬಿದಿರೆ ಬ್ಯಾಟರಿ ಕಳ್ಳತನ ಪ್ರಕರಣ ಬೇಧಿಸಿದ ಸಂದೇಶ್ & ಟೀಮ್


ಮೂಡುಬಿದಿರೆಯ ಈಗಿನ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಮಾತನಾಡುವುದು ಕಮ್ಮಿ, ಆದ್ರೆ ಕೆಲಸ ಜಾಸ್ತಿ. ಕಳೆದ ಕೆಲವು ತಿಂಗಳುಗಳಿಂದ ಮೂಡುಬಿದಿರೆಯ ಕೆಲವೆಡೆ ಹಿಟಾಚಿ, ಟಿಪ್ಪರ್ ಇತ್ಯಾದಿಗಳ ಬ್ಯಾಟರಿ ಕಳುವು ಪ್ರಕರಣಗಳು ಕೇಳಿ ಬಂದಿದ್ದವು. ತಡರಾತ್ರಿ ಹಿಟಾಚಿ, ಜೆಸಿಬಿ, ಟಿಪ್ಪರುಗಳ ಬ್ಯಾಟರಿಗಳನ್ನು ವ್ಯವಸ್ಥಿತವಾಗಿ ಕದಿಯಲಾಗುತ್ತಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಲವು ತಿಂಗಳುಗಳಿಂದ ಆರೋಪಿಗಳ ಬೇಟೆಗೆ ಬಲೆ ಬೀಸಿದ್ದ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ನೇತೃತ್ವದ ತಂಡÀ ಆರೋಪಿಗಳನ್ನು ಕದ್ದ ಬ್ಯಾಟರಿಗಳ ಸಮೇತ ವಶಕ್ಕೆ ಪಡೆದು ಪ್ರಕರಣವನ್ನು ಬೇಧಿಸಿ ಮೂಡುಬಿದಿರೆಯ ಜನರ ಶ್ಲಾಘನೆ ಪಡೆದಿದ್ದಾರೆ. ಯಾವುದೇ ಸುಳಿವು ಇಲ್ಲದಂತೆ ಅತೀ ಚಾಲಾಕಿನಿಂದ ಕಳ್ಳತನ ನಡೆಸಿದ್ದರೂ, ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಗಳೂರಿನ ಅಳಪೆ ಗ್ರಾಮದ ಧನುಷ್ ಸನಿಲ್ (31) ಮತ್ತು ಬಜಲ್ ಫೈಝಲ್ನಗರದ ಆಜ್ಮಲ್ (30) ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲ ತಿಂಗಳ ಹಿಂದೆ ಮೂಡುಬಿದಿರೆಯ ಮಚಲಿ ಹೊಟೇಲ್ ಸಮೀಪ ನಿಲ್ಲಿಸಿದ್ದ ಪಂಚಶಕ್ತಿ ರಂಜಿತ್ ಅವರಿಗೆ ಸೇರಿದ ಹಿಟಾಚಿಗಳ 4 ಬ್ಯಾಟರಿಗಳನ್ನು ಆರೋಪಿಗಳು ಎಗರಿಸಿದ್ದರು. ಮರುದಿನ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವ್ಯಾಪಕ ತನಿಖೆ ನಡೆಸಿದ್ದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಡಟ್ಸನ್ ರೆಡಿಗೋ ಕಾರು ಮತ್ತು 4 ಬ್ಯಾಟರಿಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಅಂದಾಜು ಮೌಲ್ಯ 2,80,000 ಆಗಿರುತ್ತದೆ. ಆರೋಪಿಗಳು ಇನ್ನೂ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯಿದ್ದು ತನಿಖೆಯಿಂದ ಬಹಿರಂಗಗೊಳ್ಳಲಿದೆ. ಜೊತೆಗೆ ಇನ್ನೂ ಕೆಲ ಆರೋಪಿಗಳ ಬಗ್ಗೆಯೂ ‘ಸೈಲೆಂಟ್ ವರ್ಕರ್’ ಎಂದೇ ಹೆಸರಾದ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಅವರ ತಂಡ ಮಾಹಿತಿ ಕಲೆಹಾಕಿ ತನಿಖೆ ನಡೆಸುತ್ತಿದ್ದು, ಇನ್ನಷ್ಟು ಆರೋಪಿಗಳು ಬಲೆಗೆ ಬೀಳುವ ಸಾಧ್ಯತೆಯಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಐಪಿಎಸ್, ಡಿಸಿಪಿ ಸಿದ್ದಾರ್ಥ್ ಗೋಯಲ್ ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಉತ್ತರ ವಿಬಾಗದ ಎಸಿಪಿ ಶ್ರೀಕಾಂತ್ ಕೆ. ಅವರ ನಿರ್ದೇಶನದಂತೆ, ಈ ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಠಾಣಾ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ಅವರ ನೇತೃತ್ವದ ತಂಡದಲ್ಲಿ ಪಿಎಸ್ಐ ಸಿದ್ಧಪ್ಪ ನರನೂರ, ಠಾಣಾ ಅಪರಾಧ ವಿಭಾಗದ ಸಿಬ್ಬಂಧಿ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಅವರು ಪಾಲ್ಗೊಂಡಿದ್ದರು.

Previous Post Next Post

Contact Form