ವಿಶ್ವಕರ್ಮ ಬ್ಯಾಂಕ್ ನಿರ್ದೇಶಕರಾಗಿ ಬಿ. ಸೀತಾರಾಮ ಆಚಾರ್ಯ ಮರು ಆಯ್ಕೆ


ಮೂಡುಬಿದಿರೆ: ಪ್ರತಿಷ್ಠಿತ ವಿಶ್ವಕರ್ಮ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ ಪತ್ರಕರ್ತ ಬೆಳುವಾಯಿ ಸೀತಾರಾಮ್ ಆಚಾರ್ಯ ಅವರು ತೃತೀಯ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಗಳೂರು ವಿಶ್ವಕರ್ಮ ಬ್ಯಾಂಕ್ ಕಚೇರಿಯ ಸಭಾಂಗಣದಲ್ಲಿ ಚುನಾವಣೆ  ನಡೆಯಿತು.  ಸಹಕಾರ ಸಂಘಗಳ ಉಪನಿಬಂಧಕರಾದ ವಿಲಾಸ್ ಚುನಾವಣಾಧಿಕಾರಿಯಾಗಿದ್ದರು.

ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರರಾಗಿರುವ ಸೀತಾರಾಮ ಆಚಾರ್ಯ ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Previous Post Next Post

Contact Form