ಧರ್ಮ ಭಗಿನಿಯರ ಬಂಧನ: ಕ್ಯಾಥೋಲಿಕ್ ಸಭಾ ಖಂಡನೆ


ಮೂಡುಬಿದಿರೆ: ಛತ್ತೀಸ್‌ಘಡ್‌ನಲ್ಲಿ ಮಾನವ ಕಳ್ಳ ಸಾಗಣೆ ಆರೋಪದಲ್ಲಿ ಇಬ್ಬರು  ಧರ್ಮ ಭಗಿನಿಯರನ್ನು ಬಂಧಿಸಿರುವುದನ್ನು ಮೂಡುಬಿದಿರೆ ವಲಯ ಕ್ಯಾಥೊಲಿಕ್ ಸಭಾ ಖಂಡಿಸಿದೆ, 

ಇಬ್ಬರು ಮಹಿಳೆಯರನ್ನು ಅವರ ಪೋಷಕರ ಲಿಖಿತ ಒಪ್ಪಿಗೆ ಮೇರೆಗೆ ಕಾನ್ವೆಂಟ್ ಮನೆ ಕೆಲಸಕ್ಕಾಗಿ ಕರೆದುಕೊಂಡು ಹೋಗುತ್ತಿದ್ದ ಕೇರಳದ ಸನ್ಯಾಸಿನಿಯರಾದ ಪ್ರೀತಿ ಮೇರಿ ಮತ್ತು ವಂದನ ಫ್ರಾನ್ಸಿಸ್ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಛತ್ತೀಸ್‌ಘಡ್ ಪೊಲೀಸರು ಕಾನೂನು ಸಮ್ಮತವಲ್ಲದ ರೀತಿಯಲ್ಲಿ ವರ್ತಿಸಿದ್ದು ಘಟನೆಯಿಂದ ಕ್ರೆöÊಸ್ತ ಸಮುದಾಯಕ್ಕೆ ನೋವಾಗಿದೆ. ಅಲ್ಲಿನ ಸರ್ಕಾರ ಮಧ್ಯಪ್ರವೇಶಿಸಿ ಬಂಧಿತ ಸನ್ಯಾಸಿಗಳಿಬ್ಬರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕೆಂದು ಕ್ಯಾಥೊಲಿಕ್ ಸಭಾದ ಮಾಜಿ ರಾಜಕೀಯ ಸಂಚಾಲಕ ರಾಜೇಶ್ ಕಡಲಕೆರೆ ಆಗ್ರಹಸಿದರು.

ಮೂಡುಬಿದಿರೆ ಕೆಥೊಲಿಕ್ ಸಭಾದ ಅಧ್ಯಕ್ಷ ಆಲ್ವಿನ್ ರೋಡ್ರಿಗಸ್ ಮಾತನಾಡಿ ಕ್ರೆöÊಸ್ತ ಸನ್ಯಾಸಿಗಳಿಬ್ಬರ ಬಂಧನವನ್ನು ವಿರೋಧಿಸಿ ಆ.4ರಂದು ಮಂಗಳೂರು ಕ್ರೆöÊಸ್ತ ಧರ್ಮ ಪ್ರಾಂತದ ಅಧೀನದಲ್ಲಿ ಬರುವ 124 ಕಥೋಲಿಕ್ ಸಭಾ ಘಟಕಗಳು ಹಾಗೂ ಸಮಾನ ಮನಸ್ಕರ ವತಿಯಿಂದ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ನಡೆಯಲಿರುವ ಪ್ರತಿಭಟನೆಯಲ್ಲಿ ಮೂಡುಬಿದಿರೆಯಿಂದ ಸುಮಾರು 2 ಸಾವಿರ ಕ್ರೆöÊಸ್ತರು ಭಾಗವಹಿಸಲಿದ್ದಾರೆ ಎಂದರು.

ಕ್ರೆöÊಸ್ತ ಮುಖಂಡರಾದ ರೊನಾಲ್ಡ್ ಸೆರಾವೊ, ಆಲ್ವಿನ್ ಮಿನೇಜಸ್, ಅನಿಸ್ ಡಿಸೋಜಾ ಮತ್ತು ಪ್ರವೀಣ್ ಸಿಕ್ವೇರಾ ಸುದ್ದಿಗೋಷ್ಠಿಯಲ್ಲಿದ್ದರು.

Previous Post Next Post

Contact Form