ಕಥೋಲಿಕ್ ಸಭಾದಿಂದ ಮೌಂಟ್ ರೋಜರಿ ಸಂಸ್ಥೆಯಲ್ಲಿ ಪರಿಸರ ದಿನಾಚರಣೆ


ಮೂಡುಬಿದಿರೆ: ಪ್ರಕೃತಿ ವಿಕೋಪ, ಪ್ರವಾಹವನ್ನು ತಡೆಗಟ್ಟಲು ನಾವು ಪರಿಸರ ಸ್ನೇಹಿಯಾಗಬೇಕು. ಕೆಥೋಲಿಕ್ ಸಭಾದ 18 ಸಾವಿರ ಮಂದಿ ಒಂದು ಗಿಡ ನೆಟ್ಟು ಪೋಷಿಸಿ, ಬೆಳೆಸಿ ಪರಿಸರಕ್ಕೆ ಕೊಡುಗೆ ನೀಡವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. 

ಮಂಗಳೂರು ಕೆಥೋಲಿಕ್ ಸಭಾ, ಮೂಡುಬಿದಿರೆ ಕೆಥೋಲಿಕ್ ಸಭಾ ಹಾಗೂ ಮೂಡುಬಿದಿರೆ ವಲಯ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಮೂಡುಬಿದಿರೆ ಅಲಂಗಾರು ಮೌಂಟ್ ರೋಜರಿ ಸಂಸ್ಥೆಯಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಕೆಥೋಲಿಕ್ ಸಭಾದ ಅಧ್ಯಕ್ಷ ಅಧ್ಯಕ್ಷತೆ ವಹಿಸಿದ್ದ ಸಂತೋಷ್ ಡಿಸೋಜ ಅಧ್ಯಕ್ಷತೆವಹಿಸಿ, ಗಿಡ ನೆಟ್ಟು ಪೋಷಿಸಿ ಬೆಳೆಸಿ ಮರದ ದಾಖಲೆ ನೀಡಿದ ಎಲ್ಲರಿಗೂ ಬಹುಮಾನ ನೀಡಲಾಗುವುದು ಎಂದರು. 

ಸುಮಾರು 200 ಮಂದಿಗೆ ಶುಶ್ರೂಷೆ ಮಾಡುತ್ತಿರುವ ಮೌಂಟ್ ರೋಜರಿಯ ವಂ.ಫಾ ಮೊನ್ಸಿಂಜೊರ್ ಎಡ್ವಿನ್ ಪಿಂಟೋ ಅವರನ್ನು ಸನ್ಮಾನಿಸಲಾಯಿತು. 

 ವಲಯ ಧರ್ಮಗುರು ಅತಿ ವಂ. ಓನಿಲ್ ಡಿಸೋಜಾ, ವಂ.ಫಾ.ದೀಪಕ್ ನೊರೊನ್ಹಾ, ವಂ.ಫಾ.ಮೆಲ್ವಿನ್ ನೊರೊನ್ಹಾ, ಸುಪೀರಿಯರ್ ಜನರಲ್ ಸಿ.ಸುನೀತಾ ಡಿಸೋಜಾ, ಪರಿಸರ ಸಮಿತಿಯ ಲ್ಯಾನ್ಸಿ ಮಸ್ಕರೇನಸ್, ಮೇಬಲ್ ಲೋಬೊ, ಲ್ಯಾನ್ಸಿ ಲೋಬೋ, ರೋಶನ್ ಮಿರಾಂದಾ, ಮಂಗಳೂರು ಡಿ.ಎಫ್.ಓ. ಆಂಟೋನಿ ಮರಿಯಪ್ಪ, ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಉಪಸ್ಥಿತರಿದ್ದರು. 

ಮೂಡುಬಿದಿರೆ ವಲಯ ಕೆಥೋಲಿಕ್ ಸಭಾ ಅಧ್ಯಕ್ಷ ಅಲ್ವಿನ್ ರೊಡ್ರಿಗಸ್ ಸ್ವಾಗತಿಸಿದರು. ಮನೋಹರ್ ಕುಟಿನ್ಹ ನಿರೂಪಿಸಿದರು. ಪಾವ್ಲ್ ರೋಲ್ಫಿ ಡಿಕೋಸ್ತಾ ಕಾರ್ಯಕ್ರಮ ಸಂಯೋಜಿಸಿದರು. ಸೋನಿಯಾ ಡಿಸೋಜ ಅಭಿನಂದನಾ ಪತ್ರ ವಾಚಿಸಿದರು., ಮಂಗಳೂರು ಕೆಥೋಲಿಕ್ ಸಭಾ ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೆರೊ ವಂದಿಸಿದರು.

ಮೂಡುಬಿದಿರೆ ವಲಯದ ಹನ್ನೊಂದು ಘಟಕದ ಪದಾಧಿಕಾರಿಗಳು ಹಾಜರಿದ್ದರು.

Previous Post Next Post

Contact Form