ಮೂಡುಬಿದಿರೆ: ಸಾಮಾಜಿಕ ಜಾಲತಾಣಗಳಲ್ಲಿ ಮೂಡುಬಿದಿರೆ ಬಸ್ಸಿನಲ್ಲಿ ವ್ಯಕ್ತಿಯೋರ್ವ ಯುವತಿಯೊಡನೆ ಅಸಭ್ಯ ವರ್ತನೆಯ ವೀಡಿಯೋ ಹರಿದಾಡುತ್ತಿದ್ದು ಆತನ ವಿರುದ್ಧ ಯಾರೂ ದೂರು ಕೊಡದ ಕಾರಣ ಪೊಲೀಸ್ ಇಲಾಖೆ ಆತನನ್ನು ಕರೆಸಿ ವಿಚಾರಣೆ ಮಾಡಿ ಬಿಟ್ಟಿದ್ದರು.
ಇದನ್ನು ಮೂಡುಬಿದಿರೆಯ ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸಿದ್ದು ಸಂಘಟನೆ ವತಿಯಿಂದ ಮೂಡುಬಿದಿರೆ ಠಾಣಾ ನಿರೀಕ್ಷಕರಾದ ಸಂದೇಶ್ ಪಿ ಜಿ ಅವರಿಗೆ ನಾಯಕಿಯರಾದ ರಮಿತಾ ಶೈಲೇಂದ್ರ, ಗೀತಾ, ರಂಜಿತಾ ಅವರು ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸ್ ನಿರೀಕ್ಷಕರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಇದು ಮಹಿಳೆಯರಿಗೆ ಸಾಮಾಜಿಕವಾಗಿ ನೈತಿಕವಾಗಿ ಧೈರ್ಯ ಮೂಡಿಸುವಂತಾಗಿದೆ.
ಇದನ್ನೂ ಓದಿ: ಮೂಡುಬಿದಿರೆ ಬಸ್‌ನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪಿ ವ್ಯಕ್ತಿಯ ವಿಚಾರಣೆ