ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಸಂಸ್ಥೆಗಳ ನೂತನ ಲಾಂಛನವನ್ನು ಮೂಡುಬಿದಿರೆ ತಾಲೂಕಿನ ತಹಶೀಲ್ದಾರ್ ಶ್ರೀಧರ್ ಎಸ್ ಮುಂದಲಮನಿ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು ಎದುರಾಗುವ ಅನೀರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ವಿದ್ಯೆ ಸಹಕಾರಿಯಾಗಬಲ್ಲದು ಆದ್ದರಿಂದ ಎಲ್ಲರೂ ವಿದ್ಯಾವಂತರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ದೇಹಕ್ಕೆ ಶಿರ ಪ್ರಧಾನವೆಂಬತೆ, ಸಂಸ್ಥೆಯ ಉದ್ದೇಶ, ಸಂಕಲ್ಪ, ಬದ್ಧತೆಗಳ ಸಂದೇಶವನ್ನು ಹೊಂದಿದ ಲಾಂಛನ ಸಂಸ್ಥೆಗೆ ಶಿರೋಭೂಷಣವಿದ್ದಂತೆ, ಬೆಳಕಿನ ಪ್ರತೀಕ ಎಕ್ಸಲೆಂಟಿನ ಲಾಂಛನದಲ್ಲಿ ಪುಸ್ತಕದ ಸಂಸ್ಕಾರ ಜ್ಯೋತಿಯ ಬೆಳಕಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕನ್ನೀವ ಸಂಕಲ್ಪವಿದೆ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವರು ಸಂಸ್ಥೆಯ ಸ್ಥಾಪಕ ಗೌರವಾಧ್ಯಕ್ಷರೂ ಆದ ಅಭಯಚಂದ್ರ ಜೈನ್. ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.
ಉಪಮುಖ್ಯೋಪಾಧ್ಯಾಯ ಜಯಶೀಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕ ಸ್ವಾಗತಿಸಿದರು. ಪ್ರಮೀಳಾ ಪಿಂಟೋ ವಂದಿಸಿದರು.