ಮೂಡುಬಿದಿರೆ: ಸಂಪಿಗೆ ಮಾವಿನಕಟ್ಟೆ ಬಳಿ ನಿವಾಸಿ, ಅಂಗರ ಮಜಲು ಬಾಳಿಕೆ ಗುತ್ತು ಮನೆತನದ ಹಿರಿಯ ವರ್ತಕ ನಾಗಣ್ಣ ಶೆಟ್ಟಿ(94) ಅನಾರೋಗ್ಯದಿಂದ ಶನಿವಾರ ಮಧ್ಯಾಹ್ನ ನಿಧನ ಹೊಂದಿದರು. ಅವರು ಪತ್ನಿ ವಿಶ್ರಾಂತ ಶಿಕ್ಷಕಿ ಮೀರಾ ಎನ್. ಶೆಟ್ಟಿ,ಪುತ್ರಿ ಉಷಾ ಕಿರಣ, ಅಳಿಯ ನ್ಯೂ ಕಿರಣ್ ಕ್ಯಾಶ್ಯೂನ ಪ್ರವರ್ತಕ ಎ.ಎಂ. ಕುಮಾರ್ ಅವರನ್ನು ಅಗಲಿದ್ದಾರೆ.
ಮೂಡುಬಿದಿರೆ ಮಾರುಕಟ್ಟೆಯಲ್ಲಿ ಅಂಗಡಿ ಕೋಣೆಗಳ ವ್ಯವಸ್ಥೆ ಆರಂಭವಾದಾಗ ಎಪ್ಪತ್ತರ ದಶಕದಲ್ಲಿ
ನ್ಯೂ ಕಿರಣ್ ಸ್ಟೋರ್ ಆರಂಭಿಸಿ ಮುನ್ನಡೆಸಿಕೊಂಡು ಬಂದಿದ್ದರು. ಮಾರುಕಟ್ಟೆ ಗುತ್ತಿಗೆದಾರರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.
ಮೂಡುಬಿದಿರೆಯಲ್ಲಿ ಲಯನ್ಸ್ ಸ್ಥಾಪಕ ಸದಸ್ಯರಾಗಿ, ಗೌರೀ ದೇವಸ್ಥಾನದ ಮೊಕ್ತೇಸರರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
Tags
Obituary