ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.) ಅಮನಬೆಟ್ಟು, ಪಡುಮಾರ್ನಾಡ್ ಇದರ 73ನೇ ಸೇವಾ ಯೋಜನೆಯ ಆಗಸ್ಟ್ ತಿಂಗಳ 1ನೇ ಯೋಜನೆಯನ್ನು ಮೂಡುಬಿದಿರೆ ತಾಲೂಕಿನ ಮೂಡುಮಾರ್ನಾಡ್ ಗ್ರಾಮದ ಡೆಕ್ಕಲ್ ಪರಿಸರದ ಸುನಂದಾ ಎಂಬವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ರೂ 10,000ವನ್ನು ನೀಡಲಾಯಿತು.
ಸುನಂದಾ ಅವರಿಗೆ ಕಳೆದ 8ವರ್ಷಗಳಿಂದ ವಾತದ ಸಮಸ್ಯೆಯಿದ್ದು, ಇದೀಗ ಅವರಿಗೆ ಪಿತ್ತಕೋಶದಲ್ಲಿ ಕಲ್ಲು ಇರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದಲ್ಲದೆ ಸಕ್ಕರೆ ಕಾಯಿಲೆ ಹಾಗೂ ಹೃದಯದ ಸಮಸ್ಯೆಯಿದ್ದು ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 50,000 ಖರ್ಚಾಗಿದ್ದು, ಈಗ ಮಂಗಳೂರು ಆಸ್ಪತ್ರೆಯಲ್ಲಿದ್ದು ಆಪರೇಷನ್ ಮಾಡಲು ಸುಮಾರು 3 ಲಕ್ಷ ಖರ್ಚು ಆಗಬಹುದು ಎಂದು ತಿಳಿಸಿರುತ್ತಾರೆ.
ಆಥಿ೯ಕ ಸಮಸ್ಯೆ ಇರುವುದರಿಂದ ಸೇವಾ ಸಂಘದಿಂದ ಧನ ಸಹಾಯ ನೀಡಿದೆ.