ಶ್ರೀಕೃಷ್ಣ ಸರ್ಕಲ್ ಮೊಸರು ಕುಡಿಕೆ ಕಲಾಪ: ಈಶ್ವರ ಭಟ್ಟರಿಗೆ ಶ್ರೀಕೃಷ್ಣ ಪ್ರಶಸ್ತಿ ಪ್ರದಾನ


ಮೂಡುಬಿದಿರೆ: ಇಲ್ಲಿನ ಶ್ರೀ ಗೋಪಾಲಕೃಷ್ಣ ದೇವಳದ ಮೊಸರು ಕುಡಿಕೆ ಉತ್ಸವಕ್ಕೆ ಪೂರಕವಾಗಿ ಶನಿವಾರ ಪೇಟೆಯ ಕೃಷ್ಣಕಟ್ಟೆಯ ಬಳಿ ನಡೆದ ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ 39ನೇ ಸಾಂಸ್ಕೃತಿಕ ಕಲಾಪದ ಸಭಾ ಕಾರ್ಯಕ್ರಮದಲ್ಲಿ ಅಲಂಗಾರು ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ವೇ.ಮೂ ಈಶ್ವರ ಭಟ್ ಅವರಿಗೆ ಶ್ರೀಕೃಷ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಹೈಕೋರ್ಟ್ ಹಿರಿಯ ವಕೀಲ ಇರುವೈಲು ತಾರಾನಾಥ ಪೂಜಾರಿ, ಗೋಪಾಲಕೃಷ್ಣ ದೇವಳದ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಉದ್ಯಮಿಗಳಾದ ಕೆ.ಶ್ರೀಪತಿ ಭಟ್, ಪ್ರಭಾಚಂದ್ರ ಜೈನ್, ರಾಮಕೃಷ್ಣ ಭಟ್, ವಕೀಲೆ ಮೇಘರಾಣಿ ಸಹಿತ ಗಣ್ಯರು ಮುಖ್ಯ ಅತಿಥಿಯಾಗಿದ್ದರು. 

ಪಿಯುಸಿಯಲ್ಲಿ ಸಾಧನೆ ಮಾಡಿದ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿ ಸುಶಾಂತ್ ಕರ್ಕೇರ, ಆಳ್ವಾಸ್ ಪಿಯು ಕಾಲೇಜಿನ ಪೂಜಾ ಭಂಡಾರಿ, ಎಂಎಸ್‌ಸಿಯಲ್ಲಿ ಸಾಧನೆ ಮಾಡಿದ ಮೇಘನಾ ರಾವ್ ಬೊಕ್ಕಸ, ಶ್ರೀಕೃಷ್ಣ ವೇಷಧಾರಿ ಚಂದ್ರಶೇಖರ್ ಮಳಲಿ, ಅಂತಾರಾಷ್ಟಿçÃಯ ಫೋಟೋಗ್ರಾಫಿ ಪದಕ ಪಡೆದ ರವಿ ಕೋಟ್ಯಾನ್ ಹಾಗೂ ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ ಅವರನ್ನು ಗೌರವಿಸಲಾಯಿತು. 

ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್‌ನ ಗೌರವಾಧ್ಯಕ್ಷ ಸುದರ್ಶನ್ ಎಂ., ಅಧ್ಯಕ್ಷ ಸಂತೋಷ್ ಕುಮಾರ್, ಸಂಚಾಲಕ ಬಿ.ಸುರೇಶ್ ರಾವ್, ಪ್ರಧಾನ ಕಾರ್ಯದರ್ಶಿ ಸುಶಾಂತ್ ಕರ್ಕೇರ ಮಾರೂರು, ಉಪಾಧ್ಯಕ್ಷರಾದ ಸತೀಶ್ ಭಂಡಾರಿ. ಸಂಜೀವ ನಾಯ್ಕ್, ಜೊತೆ ಕಾರ್ಯದರ್ಶಿಗಳಾದ ಆನಂದ ಭಂಡಾರಿ, ಆನಂದ ಸುವರ್ಣ, ಸುರೇಶ್ ಭಂಡಾರಿ, ಕೋಶಾಧಿಕಾರಿ ಶಿವಾನಂದ ಶಾಂತಿ, ಗೌರವ ಸಲಹೆಗಾರರಾದ ಕೆ.ವಿ ರಮಣ್, ಧನಂಜಯ ಮೂಡುಬಿದಿರೆ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಅಯನಾ ವಿ.ರಮಣ್ ಸನ್ಮಾನಪತ್ರ ವಾಚಿಸಿದರು.

Previous Post Next Post

Contact Form