ಮಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಮ್ ಕೇಂದ್ರೀಯ ಸಮಿತಿ ಚುನಾವಣೆ ರವಿವಾರ ನಡೆದಿದ್ದು ಮೂಡುಬಿದಿರೆ ವಲಯದ ಜ್ಯಾಕ್ಸನ್ ಎರಿಕ್ ಡಿಕೋಸ್ತಾ ನಿರೀಕ್ಷೆಯಂತೆಯೇ ಪ್ರಚಂಡ ಜಯಗಳಿಸಿದ್ದಾರೆ. ಅಲಂಗಾರಿನ ಅನೀಶ್ ಡಿಸೋಜಾ ಕೇಂದ್ರೀಯ ಸಮಿತಿಯ ಲೆಕ್ಕಪರಿಶೋಧಕರಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಕಥೊಲಿಕ್ ಯುವ ಸಂಚಲನದ ಅಧ್ಯಕ್ಷ ಹುದ್ದೆಗೆ ಒಟ್ಟು ಮೂವರು ಸ್ಪರ್ಧಿಸಿದ್ದು, ಮೂಡುಬಿದಿರೆ ವಲಯದ ವಾಮದಪದವಿನ ಜ್ಯಾಕ್ಸನ್ ಎರಿಕ್ ಡಿಕೋಸ್ತಾ ೧೬೪ ಮತಗಳನ್ನು ಪಡೆದು ಭರ್ಜರಿ ವಿಜಯ ದಾಖಲಿಸಿದ್ದಾರೆ. ಎದುರಾಳಿಗಳಾದ ಜ್ಯಾಕ್ಸನ್ ಪಕ್ಷಿಕೆರೆ ೧೩೬ ಮತ ಮತ್ತು ಸ್ಟ್ಯಾನ್ಲಿ ಪಾನೀರ್ ೧೦೧ ಮತಗಳನ್ನು ಪಡೆದು ಸೋಲೊಪ್ಪಿಕೊಳ್ಳಬೇಕಾಯಿತು.
ಜ್ಯಾಕ್ಸನ್ ಡಿಕೋಸ್ತಾ ಅವರು ಸಿದ್ಧಕಟ್ಟೆ ಐಸಿವೈಎಮ್ ಘಟಕದ ಅಧ್ಯಕ್ಷರಾಗಿ, ೨೦೧೪-೧೫ನೇ ಸಾಲಿನಲ್ಲಿ ಮೂಡುಬಿದಿರೆ ವಲಯ ಐಸಿವೈಎಮ್ ಅಧ್ಯಕ್ಷರಾಗಿ ಮಾತ್ರವಲ್ಲದೆ, ಐಸಿವೈಎಮ್ ಕೇಂದ್ರೀಯ ಸಮಿತಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅಲಂಗಾರಿನ ಅನೀಶ್ ಡಿಸೋಜಾ ೨೩೭ ಮತಗಳನ್ನು ಪಡೆದು ಮಂಜೇಶ್ವರದ ಮಿಲ್ಟನ್ (೧೬೪ ಮತ) ಅವರನ್ನು ಮಣಿಸಿ ಲೆಕ್ಕಪರಿಶೋಧಕ ಹುದ್ದೆಗೆ ಆರಿಸಿ ಬಂದಿದ್ದಾರೆ. ಇಬ್ಬರು ಯುವಕರಿಗೂ ಟೈಮ್ಸ್ ಆಫ್ ಬೆದ್ರ ಪತ್ರಿಕೆಯ ಹಾರ್ದಿಕ ಅಭಿನಂದನೆಗಳು.
Tags
ICYM