ದನದ ಕಟ್ಟಿದ ಹಗ್ಗ ತುಂಡಾಗಿ ಶಿಕ್ಷಕಿಯೊಬ್ಬರು ಆವರಣವಿಲ್ಲದ ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ತೆಂಕಮಿಜಾರು ಗ್ರಾಮದ ಕರಿಕುಮೇರು ಎಂಬಲ್ಲಿ ಭಾನುವಾರ ನಡೆದಿದೆ.
ತೆಂಕಮಿಜಾರು ನಿವಾಸಿ ವಿನ್ಸೆಂಟ್ ಎಂಬವರ ಪುತ್ರಿ ವಿನೋಲ ಮೆಂಡೋನ್ಸಾ(೨೫) ಮೃತಪಟ್ಟವರು. ಭಾನುವಾರ ಬೆಳಿಗ್ಗೆ ಅವರು ತೋಟದಲ್ಲಿ ಕಟ್ಟಿ ಹಾಕಿದ್ದ ದನವನ್ನು ಬಿಡಿಸಿ ಹಟ್ಟಿಗೆಂದು ಹಗ್ಗದಲ್ಲಿ ಕರೆತರುವಾಗ ದನ ರಭಸದಲ್ಲಿ ಓಡತೊಡಗಿತು. ದನದ ಓಟದ ರಭಸಕ್ಕೆ ಹಗ್ಗ ತುಂಡಾದ್ದರಿಂದ ನಿಯಂತ್ರಣ ತಪ್ಪಿದ ವಿನೋಲ ಮೆಂಡೋನ್ಸಾ ಜಾರಿ ಪಕ್ಕದಲ್ಲಿದ್ದ ಆವರಣವಿಲ್ಲದ ಬಾವಿಗೆ ಬಿದ್ದು ಸಾವನಪ್ಪಿದ್ದಾರೆನ್ನಲಾಗಿದೆ. ಅಗ್ನಿಶಾಮಕದಳದವರು ಶವವನ್ನು ಬಾವಿಯಿಂದ ಮೇಲೆತ್ತಿದ್ದರು. ಘಟನೆ ಸಂದರ್ಭ ಆಕೆಯ ತಂದೆ ಚರ್ಚ್‌ಗೆ ತೆರಳಿದ್ದರು.
ವಿನೋಲ ಅವರು ವಾಮಂಜೂರು ವಿದ್ಯಾ ಜ್ಯೋತಿ ಶಾಲೆಯ ಶಿಕ್ಷಕಿಯಾಗಿ ಕೆಲವು ತಿಂಗಳ ಕಾಲ ಕೆಲಸ ಮಾಡಿದ್ದಾರೆ. ಕಂಪ್ಯೂಟರ್ ಡಿಪ್ಲೋಮ ಪದವಿ ಪಡೆದಿರುವ ಅವರು ವಿದೇಶಕ್ಕೆ ಹೋಗುವ ಸಿದ್ಧತೆಯಲ್ಲಿದ್ದರು.
