ಪೋಯಿನ ಪೂರಾ ಪೊರ್ಬುಲು ಅತ್ತೇ, ನಂಕ್ ದಾನೆ ಎಂದು ಕಮೆಂಟ್ ಮಾಡಿದ ಶಂಕರ್ ಪ್ರಸಾದ್ ಎಂಬ ಆರೋಪಿಯ ಬಗ್ಗೆ ಸುಳಿವು ಸಿಕ್ಕಿರುವ ಮಾಹಿತಿ ಟೈಮ್ಸ್ ಆಫ್ ಬೆದ್ರ ಪತ್ರಿಕೆಗೆ ಲಭ್ಯವಾಗಿದೆ.
ಕಳೆದ ತಿಂಗಳು ತ್ರಾಸಿಯಲ್ಲಿ ಘೋರ ಅಪಘಾತ ನಡೆದು ೮ ಮಕ್ಕಳು ಬಲಿಯಾದ ಬಗ್ಗೆ ’ಪೋಯಿನ ಮಾತ ಪೊರ್ಬುಲ್ ಅತ್ತೇ, ನಂಕ್ ದಾನೆ’ ಎಂದು ಅಮಾನವೀಯ ಕಮೆಂಟ್ ಹಾಕಿದ ಶಂಕರ್ ಪ್ರಸಾದ್ ಎಂಬವರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಮೂಡುಬಿದಿರೆಯ ಯುವ ನಾಯಕ ಅಶ್ವಿನ್ ಜೆ. ಪಿರೇರಾ ಅವರು ದೂರು ದಾಖಲಿಸಿ ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದರು.
ಇದೀಗ ಆರೋಪಿ ಶಂಕರ್ ಪ್ರಸಾದ್ ಅವರ ಸುಳಿವು ಸಿಕ್ಕಿದೆ ಎಂಬ ಮಾಹಿತಿ ಇದ್ದು ಪೊಲೀಸರು ಶೀಘ್ರದಲ್ಲಿಯೇ ಬಂಧಿಸಬೇಕಿದೆ. ಮೂಲಗಳ ಪ್ರಕಾರ ಶಂಕರ್ ಪ್ರಸಾದ್ ನಾಮಾಂಕಿತನು ಕಾಸರಗೋಡಿನ ಕುಂಬಳೆಯವನು ಎಂದು ಹೇಳಲಾಗುತ್ತಿದೆ. ಇಂಜಿನಿಯರಿಂಗ್‌ನಲ್ಲಿ ರೇಂಕ್ ಪಡೆದ ಈತ ಇದೀಗ ಬೆಂಗಳೂರಿನ ಕಾಲೇಜೊಂದರಲ್ಲಿ ಎಂ.ಟೆಕ್. ಓದುತ್ತಿದ್ದು, ಬಂಧನ ಭಯದಿಂದ ಬೆಂಗಳೂರಿನ ವಕೀಲರೊಬ್ಬರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆಂದು ತಿಳಿದು ಬಂದಿದೆ.
ಪೊಲೀಸರು ಕೂಡಲೇ ಈತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು ಮುಂದೆ ಈ ರೀತಿ ಅಮಾನವೀಯ ಕಮೆಂಟ್ ಗಳನ್ನು ಹಾಕಿ ಶಾಂತಿ ಕದಡುವವರಿಗೆ ತಕ್ಕ ಪಾಠ ಕಲಿಸಬೇಕಿದೆ.
