ಪಂಜಾಬ್‌ನ ಮೊಗಾ ಎಂಬಲ್ಲಿ ಫ್ಲೈ ಓವರ್ ಮೇಲೆ ಘೋರ ಅಪಘಾತಕ್ಕೀಡಾದ 19ರ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸಿದ್ದಾರೆ.
ಅದೇ ಫ್ಲೈ ಓವರ್ ಮೂಲಕ ಸಂಚರಿಸುತ್ತಿದ್ದ ಬಾಲಿವುಡ್ ನಟ ಸೋನು ಸೂದ್, ಅಪಘಾತಕ್ಕೀಡಾದ ಕಾರನ್ನು ನೋಡಿದ ಕೂಡಲೇ ಕಾರಿನಿಂದ ಇಳಿದು ಸಹಾಯಕ್ಕೆ ಧಾವಿಸಿದ್ದರು. ಅಪಘಾತಕ್ಕೀಡಾದ ವಾಹನಕ್ಕೆ ಸೆಂಟ್ರಲ್ ಲಾಕ್ ಇದ್ದಿದ್ದರಿಂದ ಯುವಕನನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಅನಂತರ ಯುವಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು.
ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭಿಸಿದ್ದರಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಹಿಂದೆಯೂ ಸೋನು ಸೂದ್ ಕೋವಿಡ್ ಎರಡನೇ ಅಲೆಯ ವೇಳೆ ಹಲವಾರು ಉತ್ತಮ ಕೆಲಸಗಳನ್ನು ಮಾಡಿ ಜನತೆಯ ಪ್ರಶಂಸೆಗೆ ಪಾತ್ರರಾಗಿದ್ದರು. (ಐಎಎನ್‌ಎಸ್)