ಫೇಸ್‌ಬುಕ್‌ ಲೈವ್‌ನಲ್ಲಿಯೇ ದಂಪತಿ ಆತ್ಮಹತ್ಯೆಗೆ ಯತ್ನ

(ಐಎಎನ್‌ಎಸ್)‌ ಆರ್ಥಿಕ ಸಮಸ್ಯೆಗಳಿಂದ ಜರ್ಜರಿತರಾದ ದಂಪತಿ ಫೇಸ್‌ಬುಕ್‌ ಲೈವ್‌ನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಭಾಗ್‌ಪತ್‌ ಜಿಲ್ಲೆಯಲ್ಲಿ ನಡೆದಿದೆ.

ಚಿಕಿತ್ಸೆ ವೇಳೆ ಪತ್ನಿ ಮೃತರಾದರೆ, ಪತಿಯ ಸ್ಥಿತಿ ಚಿಂತಾಜನಕವಾಗಿದೆ.

ಪಾದರಕ್ಷೆ ವ್ಯಾಪಾರಿ ರಾಜೀವ್‌ ತೋಂರ್‌ ಮತ್ತು ಆತನ ಪತ್ನಿ ಪೂನಮ್‌ ತೋಮರ್‌ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದುರ್ದೈವಿಗಳು.

ಫೇಸ್‌ಬುಕ್‌ ಲೈವ್‌ ನೋಡುತ್ತಿದ್ದ ಕೆಲವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುಭಾಶ್‌ನಗರದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಾಜೀವ್‌ ತೋಮರ್‌ ಹಲವಾರು ತಿಂಗಳುಗಳಿಂದ ತೀವ್ರವಾದ ಆರ್ಥಿಕ ಸಮಸ್ಯೆಯಿಂದ ಜರ್ಜರಿತರಾಗಿದ್ದರು.

ಫೇಸ್‌ಬುಕ್‌ ಲೈವ್‌ ವೇಳೆ ರಾಜೀವ್‌ ತಮ್ಮ ಸಂಕಷ್ಟವನ್ನು ಹೇಳಿಕೊಂಡು ಅಳುತ್ತಿದ್ದರು. ಹೀಗೆ ಅಳುತ್ತಲೇ ಸ್ಯಾಚೆಟೊಂದನ್ನು ತೆರೆದು ಅವರಿಂದ ಮಾತ್ರೆಯೊಂದನ್ನು ನುಂಗಿಬಿಟ್ಟರು. ಆ ವೇಳೆ ಅವರ ಪತ್ನಿ ಕೂಡಾ ಜೊತೆಯಾದರು.

ಆರ್ಥಿಕ ಸಮಸ್ಯೆಯ ಬಗ್ಗೆ ಅವರ ಕುಟುಂಬಸ್ಥರಿಗೆ ಅರಿವಿತ್ತು, ಆದರೆ ಆತ್ಮಹತ್ಯೆಯಂತಹ ಕೆಲಸಕ್ಕೆ ಅವರು ಮುಂದಾಗಬಹುದೆಂದು ಯಾರೂ ಊಹಿಸಿರಲಿಲ್ಲ.


Previous Post Next Post

Contact Form