ಮುಂಬಯಿ : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ, ಮಾಜಿ ಉಪಾಧ್ಯಕ್ಷ, ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ, ತುಳು ಸಾಹಿತಿ, ತುಳು ಲಿಪಿ ಅಧ್ಯಯನಕಾರ ಜಯಕರ ಡಿ.ಪೂಜಾರಿ (೭೭.) ಸೋಮವಾರ ಸಂಜೆ ಉಪನಗರ ಬೋರಿವಿಲಿ ಪಶ್ಚಿಮದ ಸ್ವನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.
ಮೂಲತಃ ಮೂಡುಬಿದಿರೆಯವರಾದ ಇವರು ಮುಂಬಯಿನಲ್ಲಿದ್ದು ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಇದರ ಮಾಜಿ ಉದ್ಯೋಗಿಯಾಗಿದ್ದು ನಿವೃತ್ತರಾಗಿದ್ದರು. ಐಎಎಸ್, ಬ್ಯಾಂಕಿಂಗ್ ಕ್ಷೇತ್ರ, ಮ್ಯಾನೇಜ್‌ಮೆಂಟ್ ಇತ್ಯಾದಿ ಕ್ಷೇತ್ರಗಳಲ್ಲಿ ಪರಿಣತ ವಿದ್ವಾಂಸರಾಗಿದ್ದು ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು. ಅಂತೆಯೇ ಮುಂಬಯಿಯಲ್ಲಿದ್ದು ತುಳು ಲಿಪಿ ಸಂಶೋಧನೆ, ಅಧ್ಯಯನ ಮಾಡಿ ತರಗತಿ ಮಾಡುತ್ತಿದ್ದರು.ಮೃತರು ಪತ್ನಿ, ಒಂದು ಗಂಡು, ಹೆಣ್ಣು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ. ಜಯಕರ ಪೂಜಾರಿ ನಿಧನಕ್ಕೆ ಮಹಾನಗರದಲ್ಲಿನ ಅನೇಕ ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿ ಶ್ರದ್ಧಾಂಜಲಿ ಕೋರಿದ್ದಾರೆ.
Tags
Obituary