ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ಕಾದಿದೆ. ನಂದಿನಿ ಹಾಲಿನ ದರ ಲೀಟರ್‌ಗೆ 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ. ನಂದಿನಿ ಹಾಲಿನ ದರ ಲೀಟರ್‌ಗೆ 5 ರೂ ಹೆಚ್ಚಿಸುವಂತೆ ರಾಜ್ಯದ 14 ಹಾಲಿನ ಒಕ್ಕೂಟಗಳು ಕೆಎಂಎಫ್‌ಗೆ ಮನವಿ ಸಲ್ಲಿಸಿವೆ. ಶೀಘ್ರದಲ್ಲೇ ಸಿಎಂ ಭೇಟಿಗೂ ನಿರ್ಧರಿಸಿವೆ.
ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದಲ್ಲಿದ್ದಾರೆ. ಏಪ್ರಿಲ್ 10ರೊಳಗೆ ಅವರನ್ನು ಭೇಟಿಯಾಗಿ, ದರ ಏರಿಕೆ ಪ್ರಸ್ತಾವನೆಯನ್ನು ಒಕ್ಕೂಟಗಳು ಸಲ್ಲಿಕೆ ಮಾಡಲಿವೆ. ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಜೊತೆ ಚರ್ಚೆ ನಡೆಸಿದ್ದಾರೆ.
ಕೆಎಂಎಫ್ ಕಳೆದ 4-5 ತಿಂಗಳಿನಿಂದ ಹಾಲಿನ ದರ ಏರಿಕೆಗೆ ಪ್ರಯತ್ನ ನಡೆಸಿದೆ. ಆದರೆ ಸರ್ಕಾರದ ಕಡೆಯಿಂದ ಒಪ್ಪಿಗೆ ಸಿಕ್ಕಿಲ್ಲ. ಈಗ ವಿದ್ಯುತ್ ದರವೂ ಏರಿಕೆಯಾದ ಬಳಿಕ ಹಾಲು ಒಕ್ಕೂಟಗಳ ಮುಖ್ಯಸ್ಥರು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭೇಟಿ ಮಾಡಿದ್ದಾರೆ. ಅಧ್ಯಕ್ಷರು ಏಪ್ರಿಲ್ 10ರೊಳಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸೋಣ ಎಂದು ಭರವಸೆ ನೀಡಿದ್ದಾರೆ.
2020ರಲ್ಲಿ ಲೀಟರ್ ಹಾಲಿಗೆ ಕೇವಲ 2ರೂ ಏರಿಕೆಯಾಗಿತ್ತು. ರೈತರು ಕಷ್ಟದಲ್ಲಿದ್ದಾರೆ. ಹಾಲು ಒಕ್ಕೂಟಗಳೂ ನಷ್ಟದಲ್ಲಿವೆ. ಹಾಲಿನ ದರ ಏರಿಕೆ ಅನಿವಾಯ ಎನ್ನುತ್ತಿವೆ ಒಕ್ಕೂಟಗಳು.