ಎಂಬಿಬಿಎಸ್ ಪ್ರವೇಶದಲ್ಲಿ ಆಳ್ವಾಸ್ ಮಾಡಿದ್ದೇನು ಗೊತ್ತಾ?
ಮೂಡುಬಿದಿರೆ : ಶಿಕ್ಷಣ ಕ್ಷೇತ್ರದಲ್ಲಿ ಆಳ್ವಾಸ್ ನೂರಾರು ದಾಖಲೆಗಳನ್ನು ಮಾಡುತ್ತಲೇ ಇರುತ್ತದೆ. ಆದರೆ ಈ ಬಾರಿ ಆಳ್ವಾಸ್ ಪಿಯು ಕಾಲೇಜು ಮಾಡಿರುವ ಕೆಲಸ ಎಂತಹವರನ್ನೂ ಹೈರಾಣಾಗಿಸುತ್ತದೆ ನೋಡಿ...
ಈ ವರ್ಷ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಆಳ್ವಾಸ್‍ನ ಬರೋಬ್ಬರಿ 377 ವಿದ್ಯಾರ್ಥಿಗಳು ಸರಕಾರಿ ಕೋಟಾದಡಿ ಎಂಬಿಬಿಎಸ್ ಸೀಟುಗಳನ್ನು ಪಡೆದಿದ್ದಾರೆ ಎಂದರೆ ನಂಬುತ್ತೀರಾ? ಯೆಸ್, ಈ ಬಾರಿ ಆಳ್ವಾಸ್ ಪಿಯು ಕಾಲೇಜಿನಲ್ಲಿ ಕಲಿತ 377 ವಿದ್ಯಾರ್ಥಿಗಳು ಪಕ್ಕಾ ಮೆರಿಟ್ ಆಧಾರದಲ್ಲಿಯೇ ವೈದ್ಯಕೀಯ ಸೀಟು ಪಡೆದಿದ್ದಾರೆ.
ಈ ಮೂಲಕ ಆಳ್ವಾಸ್ ಪಿಯು ಕಾಲೇಜು ರಾಜ್ಯದಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣಕ್ಕೆ ನೀಡಿದೆ. ಇನ್ನು ಕೆಲವೇ ವರ್ಷಗಳಲ್ಲಿ ಅಷ್ಟು ವಿದ್ಯಾರ್ಥಿಗಳು ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ತಯಾರಾಗುತ್ತಾರೆ ನೋಡಿ. ಹೀಗೊಂದು ಅದ್ಭುತ ಸಾಧನೆಯ ಹಿಂದೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಮೋಹನ ಆಳ್ವ, ಮತ್ತು ಅವರ ಬೆನ್ನ ಹಿಂದೆ ನಿಂತಿರುವ ಸಾವಿರಾರು ಶಿಕ್ಷಕ ಶಿಕ್ಷಕೇತರ ಸಿಬ್ಬಂಧಿಗಳ ಶ್ರಮವಿದೆ.
ಇನ್ನೊಂದು ಮಹತ್ವದ ವಿಚಾರವನ್ನು ನೀವು ಗಮನಕ್ಕೆ ತೆಗೆದುಕೊಳ್ಳಬೇಕು. ಅದೇನೆಂದರೆ 377 ವಿದ್ಯಾರ್ಥಿಗಳಲ್ಲಿ 150 ವಿದ್ಯಾರ್ಥಿಗಳು ದತ್ತು ಸ್ವೀಕಾರ ಯೋಜನೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು ಈ ವಿದ್ಯಾರ್ಥಿಗಳಿಗಾಗಿ ರೂಪಾಯಿ ಮೂರು ಕೋಟಿಗೂ ಮಿಕ್ಕಿದ ಮೊತ್ತದ ಹಣವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವೇ ಸೇವಾ ರೂಪದಲ್ಲಿ ವಿನಿಯೋಗಿಸಿದೆ. ಈ ಯೋಜನೆಯ ಫಲಾನುಭವಿಗಳಾಗಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು.
ವೈದ್ಯಕೀಯ ಶಿಕ್ಷಣಕ್ಕೆ ಅರ್ಹರಾದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವ ಮತ್ತು ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮೊಹಮ್ಮದ್ ಸದಾಕತ್‍ರವರು ಅಭಿನಂದಿಸಿದ್ದಾರೆ.
ದೆಹಲಿಯಲ್ಲಿರುವ ದೇಶದ ಪ್ರತಿಷ್ಠಿತ ಏಮ್ಸ್‍ಗೆ ಆಳ್ವಾಸಿನ ವಿದ್ಯಾರ್ಥಿಗಳಾದ ಹರ್ಷಿತಾ ಗಂಗಾಧರಪ್ಪ ನೆಗಲೂರು ಮತ್ತು ಶೈಕ್ಷಾ ನಾಯಕ, ರಾಯಬರೇಲಿಯ ಏಮ್ಸ್‍ಗೆ ರಕ್ಷಿತ್ ಪರೀಕ್, ಪುಣೆಯಲ್ಲಿರುವ ಆರ್ಮ್‍ಡ್ ಫೋರ್ಸಸ್ ಮೆಡಿಕಲ್ ಕಾಲೇಜ್‍ಗೆ ಶಿವರಾಜ್ ಎಮ್ ಉಮ್ಮಜಪ್ಪನ್ವರ್ ಆಯ್ಕೆಯಾಗಿ ರಾಷ್ಟ್ರದ ಗಮನ ಸೆಳೆದಿದ್ದಾರೆ. ರಾಜ್ಯದ ವಿವಿಧ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 213 ವಿದ್ಯಾರ್ಥಿಗಳು, ಖಾಸಗಿ ವೈದ್ಯಕೀಯ ಕಾಲೇಜುಗಳ ಸರಕಾರಿ ಕೋಟದಲ್ಲಿ 106 ವಿದ್ಯಾರ್ಥಿಗಳು, ಖಾಸಗಿ ಕೋಟಾದಲ್ಲಿ 58 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಅಧ್ಯಯನಕ್ಕೆ ಪ್ರವೇಶ ಪಡೆದಿದ್ದಾರೆ.
ವಿಶೇಷವೆಂದರೆ ಈ ವಿದ್ಯಾರ್ಥಿಗಳಲ್ಲಿ 30 ಎಸ್.ಸಿ. ವಿದ್ಯಾರ್ಥಿಗಳು, 15 ಎಸ್.ಟಿ. ವಿದ್ಯಾರ್ಥಿಗಳು, 29 ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ಕೋಟಾ ಹಾಗೂ 51 ವಿದ್ಯಾರ್ಥಿಗಳು ಹೈದರಾಬಾದ್ ಕರ್ನಾಟಕ ಕೋಟಾದಡಿಯಲ್ಲಿ ಪ್ರವೇಶಾತಿ ಪಡೆದವರು.
ಇಂತಹ ಅಪೂರ್ವ ಸಾಧನೆ ಮಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಓದುಗರ ಪರವಾಗಿ ಹಾರ್ಧಿಕ ಅಭಿನಂದನೆಗಳು.
ವಿವಿಧ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾತಿ ಪಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ:
ಬೆಂಗಳೂರು ಮೆಡಿಕಲ್ ಕಾಲೇಜು - 25 ವಿದ್ಯಾರ್ಥಿಗಳು
ಮೈಸೂರು ಮೆಡಿಕಲ್ ಕಾಲೇಜು - 18 ವಿದ್ಯಾರ್ಥಿಗಳು
ಗದಗ ಮೆಡಿಕಲ್ ಕಾಲೇಜು - 21 ವಿದ್ಯಾರ್ಥಿಗಳು
ಶಿವಮೊಗ್ಗ ಮೆಡಿಕಲ್ ಕಾಲೇಜು - 20 ವಿದ್ಯಾರ್ಥಿಗಳು
ಕೊಡಗು ಮೆಡಿಕಲ್ ಕಾಲೇಜು - 18 ವಿದ್ಯಾರ್ಥಿಗಳು
ವಿಜಯನಗರ ಮೆಡಿಕಲ್ ಕಾಲೇಜು - 15 ವಿದ್ಯಾರ್ಥಿಗಳು
ಹಾಸನ ಮೆಡಿಕಲ್ ಕಾಲೇಜು - 14 ವಿದ್ಯಾರ್ಥಿಗಳು
ಕಾರವಾರ ಮೆಡಿಕಲ್ ಕಾಲೇಜು - 14 ವಿದ್ಯಾರ್ಥಿಗಳು
ಕರ್ನಾಟಕ ಮೆಡಿಕಲ್ ಕಾಲೇಜು, ಹುಬ್ಬಳ್ಳಿ - 13 ವಿದ್ಯಾರ್ಥಿಗಳು
ಬೆಳಗಾವಿ ಮೆಡಿಕಲ್ ಕಾಲೇಜು - 11 ವಿದ್ಯಾರ್ಥಿಗಳು
ಕೊಪ್ಪಳ ಮೆಡಿಕಲ್ ಕಾಲೇಜು - 7 ವಿದ್ಯಾರ್ಥಿಗಳು
ಮಂಡ್ಯ ಮೆಡಿಕಲ್ ಕಾಲೇಜು - 6 ವಿದ್ಯಾರ್ಥಿಗಳು
ರಾಯಚೂರು ಮೆಡಿಕಲ್ ಕಾಲೇಜು - 5 ವಿದ್ಯಾರ್ಥಿಗಳು
ಚಾಮರಾಜನಗರ ಮೆಡಿಕಲ್ ಕಾಲೇಜು - 5 ವಿದ್ಯಾರ್ಥಿಗಳು
ಗುಲ್ಬರ್ಗ ಮೆಡಿಕಲ್ ಕಾಲೇಜು - 4 ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು - 4 ವಿದ್ಯಾರ್ಥಿಗಳು
ಬೀದರ್ ಮೆಡಿಕಲ್ ಕಾಲೇಜು - 3 ವಿದ್ಯಾರ್ಥಿಗಳು
ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜು, ಬೆಂಗಳೂರು - 3 ವಿದ್ಯಾರ್ಥಿಗಳು
ಎಂಪ್ಲಾಯೀಸ್ ಸ್ಟೇಟ್ ಇನ್ಸೂರೆನ್ಸ್ ಕಾರ್ಪೊರೇಶನ್ ಮೆಡಿಕಲ್ ಕಾಲೇಜು, ಬೆಂಗಳೂರು - 2 ವಿದ್ಯಾರ್ಥಿಗಳು
ಯಾದಗಿರಿ ಮೆಡಿಕಲ್ ಕಾಲೇಜು - 1 ವಿದ್ಯಾರ್ಥಿ.