ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದ ಬಳಿ ಇರುವ ಮಾರಿಗುಡಿಗೆ ನುಗ್ಗಿ ಗದ್ದುಗೆ ಮಂಟಪದಲ್ಲಿದ್ದ ಮೂರು ಕಾಣಿಕೆ ಡಬ್ಬಗಳನ್ನು ಕಳವುಗೈದಿರುವ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹೆಜಮಾಡಿಯ ಕೊಕ್ರಾಣಿ ಗ್ರಾಮದ ಕಕ್ವಾ ನಿವಾಸಿ ವಿಜಯ ಯಾನೆ ಕೊಕ್ರಾಣಿ ವಿಜಯ್ ಬಂಧಿತ ಆರೋಪಿ. ಈತ ಜ.15ರಂದು ರಾತ್ರಿ ಮೂಡುಬಿದಿರೆಯ ಮಾರಿಗುಡಿಗೆ ಪ್ರವೇಶಿಸಿ ಕಾಣಿಕೆ ಡಬ್ಬಿಗಳನ್ನು ಕಳವುಗೈದಿದ್ದ ಎನ್ನಲಾಗಿದೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾಣಿಕೆ ಡಬ್ಬಿಗಳಲ್ಲಿ ಸುಮಾರು 40,000ದಷ್ಟು ನಗದು ಇತ್ತು ಎನ್ನಲಾಗಿತ್ತು. ಆದರೆ ಆರೋಪಿಯು ಡಬ್ಬಿಯಲ್ಲಿ 17,000 ಮಾತ್ರ ಇತ್ತು ಎಂದು ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಈತನ ವಿರುದ್ಧ ಈ ಹಿಂದೆಯೂ ಬೇರೆ ಬೇರೆ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.