ಮೂಡುಬಿದಿರೆ: ಇಲ್ಲಿನ ಹಳೆ ಪೊಲೀಸ್ ಠಾಣೆಯ ಬಳಿ ರೂ 9.50 ಲಕ್ಷ ಪುರಸಭಾ ನಿಧಿಯಿಂದ ಮಾಡಿರುವ ಅಭಿವೃದ್ಧಿ ಕಾಮಗಾರಿಗಳಾದ ರಸ್ತೆ ಅಗಲೀಕರಣ, ಚರಂಡಿ ವ್ಯವಸ್ಥೆ, ಹಾಗೂ ನೂತನ ಹೈಮಾಸ್ಟ್ ದೀಪದ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್ ನೆರವೇರಿಸಿದರು.
ಉಪಾಧ್ಯಕ್ಷೆ ಸುಜಾತಾ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯರಾದ ಸ್ವಾತಿ ಪ್ರಭು, ಶ್ವೇತಾ ಪ್ರವೀಣ್, ಧನಲಕ್ಷ್ಮಿ ಮಾರೂರ್, ಎಂ ಸಿ ಎಸ್ ಬ್ಯಾಂಕಿನ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಭಟ್, ಪ್ರಮುಖರಾದ ದಯಾನಂದ ಪೈ, ಲಕ್ಷ್ಮಣ್ ಪೂಜಾರಿ, ರಾಜೇಶ್ ಮಲ್ಯ, ಸಾತ್ವಿಕ್ ಮಲ್ಯ, ರಾಹುಲ್ ಕುಲಾಲ್, ಅಭಿಷೇಕ್ ಕುಂದರ್, ಅಣ್ಣಪ್ಪ ಹಾಗೂ ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.