ಮಂಗಳೂರು : ಅತಿ ವೇಗದಿಂದ ಚಲಿಸುತ್ತಿದ್ದ ಲಾರಿ ಸ್ಕೂಟರಿಗೆ ಅಪ್ಪಳಿಸಿದ ಪರಿಣಾಮಿಬ್ಬರು ಮೃತಪಟ್ಟ ಧಾರುಣ ಘಟನೆ ಶನಿವಾರ ಮಧ್ಯಾಹ್ನ 12.15ಕ್ಕೆ ನಗರದ ನಂತೂರ್ ಜಂಕ್ಷನ್ನಿನಲ್ಲಿ ನಡೆದಿದೆ.
ಸ್ಯಾಮುವೆಲ್ ಜೆಸುದಾಸ್ (66) ಮತ್ತು ಅವರ ಸಂಬಂಧಿ ಭೂಮಿಕಾ (17) ಮೃತಪಟ್ಟ ದುರ್ದೈವಿಗಳು.
ಸತೀಶ್ ಗೌಡ ಎಂಬ ಚಾಲಕ ಪಂಪ್ ವೆಲ್ ಕಡೆಯಿಂದ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿ ಬಂದಿದ್ದು, ಪಂಪ್‌ವೆಲ್ ಕಡೆಯಿಂದ ಬಂದ ಟಿಪ್ಪರ್ ಅದೇ ಮಾರ್ಗದಲ್ಲಿ ಮುಂದೆ ಇದ್ದ ಆಕ್ಟೀವಾ ಸ್ಕೂಟರ್‌ಗೆ ನಂತೂರು ಸರ್ಕಲ್ ಬಳಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್‌ನಲ್ಲಿದ್ದ ಸ್ಯಾಮುಯೆಲ್ ಹಾಗೂ ಭೂಮಿಕಾ ಕೆಳಕ್ಕೆ ಬಿದ್ದಿದ್ದು, ಈ ವೇಳೆ ಇಬ್ಬರ ತಲೆಯ ಮೇಲೆ ಟಿಪ್ಪರ್ ಚಕ್ರ ಹರಿದಿದೆ. ಇದರಿಂದ ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆನ್ಲಾಕ್ ಆಸ್ಪತ್ರೆಗೆ ಇಬ್ಬರನ್ನು ಸಾಗಿಸಲಾಗಿದ್ದು, ವೈದ್ಯರು ಅವರು ಮೃತಪಟ್ಟಿರುವುದನ್ನು ಧೃಢಪಡಿಸಿದ್ದಾರೆ.
ಸಂಚಾರ ಪೂರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಉದ್ರಿಕ್ರ ಸಾರ್ವಜನಿಕರು ಚಾಲಕನನ್ನು ಥಳಿಸಿದ್ದಾರೆ. ಕೆಲಕಾಲ ನಂತೂರ್ ಜಂಕ್ಷನ್ನಿನಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.