ಸೌದಿ ಅರೇಬಿಯಾ ರಸ್ತೆ ಅಪಘಾತದಲ್ಲಿ ಮಲ್ಲೂರಿನ ಯುವಕ ಮೃತ್ಯು


ಸೌದಿ ಅರೇಬಿಯಾದ ಜುಬೈಲ್ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಲ್ಲೂರು ನಿವಾಸಿ ಸುಲೈಮಾನ್ (35) ಎಂಬವರು ಮೃತಪಟ್ಟಿದ್ದಾರೆ.


ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಸುಲೈಮಾನ್ ಅವರಿಗೆ ವಾಹನ ಢಿಕ್ಕಿ ಹೊಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸುಲೈಮಾನ್ ಅವರು ಜುಬೈಲಿನ ಲುಮಿನಾಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಮಲ್ಲೂರು ಪಲ್ಲಿಬೆಟ್ಟು ಅಬೂಬಕ್ಕರ್ ಅವರ ಪುತ್ರನಾದ ಸುಲೈಮಾನ್ ಅವರಿಗೆ ಇಬ್ಬರು ಮಕ್ಕಳಿದ್ದು ಅವರು ಇದೇ ಏಪ್ರಿಲ್ 20ರಂದು ಊರಿಗೆ ಬರಲು ನಿರ್ಧರಿಸಿದ್ದರು.


Previous Post Next Post

Contact Form