ತಿರುಮಲ ತಿರುಪತಿ ಟ್ರಸ್ಟಿಗೆ 3 ಕೋಟಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್


ತಿರುಪತಿ: ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯ ಉಲ್ಲಂಘನೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಭಾರತದ ಅತೀ ಶ್ರೀಮಂತ ಧಾರ್ಮಿಕ ಟ್ರಸ್ಟ್ ತಿರುಮಲ ತಿರುಪತಿ ದೇವಸ್ಥಾನಂಗೆ 3 ಕೋಟಿ ರೂಪಾಯಿ ದಂಡ ವಿಧಿಸಿದೆ.

ಭಕ್ತಾಧಿಗಳು ದೇವಸ್ಥಾನದ ಹುಂಡಿಗೆ ಹಾಕಿದ್ದ ವಿದೇಶಿ ಕರೆನ್ಸಿಯನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಾಗ ರಿಸರ್ವ್ ಬ್ಯಾಂಕಿನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಪಾಲಿಸದ ಹಿನ್ನಲೆಯಲ್ಲಿ ದಂಡ ವಿಧಿಸಿದೆ ಎಂದು ಟಿಟಿಡಿ ಚೇರ್ಮೆನ್ ವೈ.ವಿ. ಸುಬ್ಬಾ ರೆಡ್ಡಿ ಹೇಳಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನದ  ಎಫ್.ಸಿ.ಆರ್.ಎ. ಲೈಸನ್ಸ್ 2018ರಲ್ಲಿ ಮುಗಿದಿದ್ದು ಅದನ್ನು ನವೀಕರಿಸದ ಕಾರಣ ವಿದೇಶಿ ಕರೆನ್ಸಿಯನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಾಗ ಸಮಸ್ಯೆಯಾಗಿದೆ.

ಟಿಟಿಡಿಯು 2 ಕಂತುಗಳಲ್ಲಿ ರಿಸರ್ವ್ ಬ್ಯಾಂಕಿಗೆ 3 ಕೋಟಿ ರೂಪಾಯಿ ದಂಡಕಟ್ಟಿದ್ದು ಎಫ್.ಸಿ.ಆರ್.ಎ. ಲೈಸನ್ಸ್ ನವೀಕರಿಸುವಂತೆ ಮನವಿ ಮಾಡಲಾಗಿದೆ ಎಂದು ಸುಬ್ಬಾ ರೆಡ್ಡಿ ಹೇಳಿದ್ದಾರೆ.

ದೇವಸ್ಥಾನದ ಹುಂಡಿಗೆ ಭಕ್ತಾದಿಗಳು ಹಾಕಿದ್ದ ಸುಮಾರು 30 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ದೇವಸ್ಥಾನದ ಬಳಿ ಇದೆ ಎಂದು ಅವರು ಹೇಳಿದ್ದಾರೆ. (ಮಾಹಿತಿ: ಐ.ಎ.ಎನ್.ಎಸ್)

Previous Post Next Post

Contact Form