ಹೊಸ ವಾಹನ ಖರೀದಿಸುತ್ತಿದ್ದೀರಾ? ಹಾಗಾದರೆ ಇದನ್ನೊಮ್ಮೆ ಓದಿಕೊಳ್ಳಿ. ಕೇಂದ್ರ ಸಾರಿಗೆ ಸಚಿವಾಲಯ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ಇದರ ಪ್ರಕಾರ ಹೊಸ ವಾಹನದ ರಿಜಿಸ್ಟ್ರೇಶನ್ ಮಾಡಿ, ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಹಾಕಿದ ಮೇಲಷ್ಟೇ ಹೊಸ ವಾಹನ ಡೆಲಿವರಿ ನೀಡಬಹುದಾಗಿದೆ.
ಹಿಂದೆ ವಾಹನದ ಮೊತ್ತ ಪಾವತಿ ಮಾಡಿದರೆ ರಿಜಿಸ್ಟ್ರೇಶನ್ ಗಿಂತಲೂ ಮೊದಲೇ ವಾಹನವನ್ನು ಗ್ರಾಹಕರಿಗೆ ನೀಡಲಾಗುತ್ತಿದ್ದು, ಇದೀಗ ಇದಕ್ಕೆ ಬ್ರೇಕ್ ಬಿದ್ದಿದೆ. ಇನ್ನು ಮುಂದೆ ಆರ್.ಟಿ.ಓ.ದಲ್ಲಿ ಹೊಸ ವಾಹನ ರಿಜಿಸ್ಟ್ರೇಶನ್ ಆಗಿ ನಂಬರ್ ಪ್ಲೇಟ್ ಹಾಕಿದ ಮೇಲಷ್ಟೇ ಗ್ರಾಹಕರಿಗೆ ಹೊಸ ವಾಹನ ನೀಡಲಾಗುತ್ತದೆ.
