ಮೂಡುಬಿದಿರೆ: ಇಲ್ಲಿನ ಮಿಜಾರಿನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಮುಂಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲಾ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರ್ ಸವಾರನೊಬ್ಬ ಕಾರಿಗೆ ಢಿಕ್ಕಿ ಹೊಡೆದು, ಸಿನಿಮೀಯ ರೀತಿಯಲ್ಲಿ ಚಿಮ್ಮಿದ ವಿಡಿಯೋ ವೈರಲ್ ಆಗುತ್ತಿದೆ.
ಇಂದು ಮಧ್ಯಾಹ್ನ 12:47ರ ಸುಮಾರಿಗೆ ರಸ್ತೆಗೆ ಬಂದು ಮುಂದೆ ಸಾಗಿದ ಶಾಲಾ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮುಂದಿನಿಂದ ಬರುತ್ತಿದ್ದಕಾರನ್ನು ಗಮನಿಸದೆ ಸ್ಕೂಟರ್ ಚಾಲಕ ಮುನ್ನುಗ್ಗಿದ್ದು, ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಎಷ್ಟೆತ್ತರಕ್ಕೆ ಚಿಮ್ಮಿ ಬಿದ್ದಿದ್ದಾನೆ.
ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
