ಮೂಡುಬಿದಿರೆ: ಮಹಿಳೆ ನೇಣಿಗೆ ಶರಣು


(Representational Image)

ಮೂಡುಬಿದಿರೆ: ಕಳೆದೆರಡು ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೋರ್ವರು ಬುಧವಾರ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪುರಸಭಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದ ಗೌರಿಕೆರೆ ರಾಮ ಮಂದಿರ ಬಳಿಯ ನಿವಾಸಿ  ಚಂದ್ರಶೇಖರ ಭಟ್ ಎಂಬವರ ಪತ್ನಿ ಕುಸುಮಾ (49 ವ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಮನೆಯಲ್ಲಿ ಮಹಿಳೆಯ ಗರ್ಭಿಣಿ ಮಗಳು ಇದ್ದು ಅವರು ಮಲಗಿದ್ದರು. ಬೆಳಿಗ್ಗೆ 8.30ರ ವೇಳೆಗೆ ಮಗಳು ಎದ್ದು ಮನೆಯ ಹಾಲ್ ಗೆ ಬಂದಾಗ ತಾಯಿ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಗಮನಕ್ಕೆ ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳಿಗ್ಗೆ ಸಮಯ 7 ರಿಂದ 8 ಗಂಟೆಯ ಮಧ್ಯೆ ನಡೆದಿರಬಹುದೆಂದು ಪೊಲೀಸರು ತಿಳಿಸಿದ್ದಾರೆ. ಕುಸುಮಾ ಅವರು ಈ ಹಿಂದೆ ಖಾಸಗಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು ಎನ್ನಲಾಗಿದೆ. ಅವರಿಗೆ ಕಳೆದೆರಡು ವರ್ಷಗಳಿಂದ ಮಾನಸಿಕ ಖಿನ್ನತೆಗೆ ಚಿಕಿತ್ಸೆ ನಡೆಯುತ್ತಿತ್ತು ಎನ್ನಲಾಗಿದೆ.

Previous Post Next Post

Contact Form